ಕೊಪ್ಪಳ ತಾಲ್ಲೂಕಿನ ಟಣಕನಕಲ್ಲ ಗ್ರಾಮದ ಸಂಪ್ರೀತ್ ಸಂಗಯ್ಯ ಹಿರೇಮಠ(1) ಮೃತ ಬಾಲಕ. ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೊಪ್ಪಳದ ಮಹಾಲಕ್ಷ್ಮಿ ಕೋರಗಲ್ಲಮಠ, ಗಂಗಮ್ಮ, ಶಿವಪ್ಪ ಶರಣಯ್ಯ, ಪ್ರೀತಿ ಹಿರೇಮಠ, ವಿರೂಪಾಕ್ಷಯ್ಯ ಬಸಯ್ಯ ಕೋರಗಲ್ಲಮಠ ಅವರಿಗೆ ಬಲವಾದ ಮತ್ತು ಸಣ್ಣಪುಟ್ಟ ಗಾಯಗಳಾಗಿವೆ. ಮತ್ತೊಂದು ಕಾರಿನಲ್ಲಿದ್ದ ಸಂಗನಾಳ ಗ್ರಾಮದ ಸಂಗಪ್ಪ ದೇವಪ್ಪ ಗಡಾದ, ಪ್ರಭುದೇವ ಶಾಂತಪ್ಪ ಹೊಸಂಗಡಿ ಅವರಿಗೂ ಗಾಯಗಳಾಗಿದ್ದು, ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.