ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಟಗಿ: ಕರಡಿ ಸಂಗಣ್ಣ ಎದುರು ಮೋದಿ ಪರ ಘೋಷಣೆ

Published 4 ಮೇ 2024, 4:40 IST
Last Updated 4 ಮೇ 2024, 4:40 IST
ಅಕ್ಷರ ಗಾತ್ರ

ಕಾರಟಗಿ: ಚುನಾವಣಾ ಪ್ರಚಾರ ಮುಗಿಸಿಕೊಂಡು ಸಿಂಧನೂರಿನಿಂದ ಕೊಪ್ಪಳಕ್ಕೆ ಬರುವ ಮಾರ್ಗಮಧ್ಯದ ಕಾರಟಗಿಯಲ್ಲಿ ಶುಕ್ರವಾರ ಕಾಂಗ್ರೆಸ್‌ ಮುಖಂಡ ಸಂಗಣ್ಣ ಕರಡಿ ಅವರ ವಾಹನವನ್ನು ಬಿಜೆಪಿ ಕಾರ್ಯಕರ್ತರು ಅಡ್ಡಗಟ್ಟಿ ಮೋದಿ, ಮೋದಿ ಎಂದು ಘೋಷಣೆ ಕೂಗಿದ ಘಟನೆ ನಡೆಯಿತು.

ಇಲ್ಲಿನ ಲೋಕಸಭಾ ಕ್ಷೇತ್ರದಿಂದ ಸಂಗಣ್ಣ ಕರಡಿ ಸತತ ಎರಡು ಬಾರಿ ಸಂಸದರಾಗಿದ್ದರು. ಪಕ್ಷ ಈ ಬಾರಿ ಬೇರೆಯವರಿಗೆ ಟಿಕೆಟ್ ನೀಡಿದ್ದು ಅವರು ಕಾಂಗ್ರೆಸ್ ಸೇರಿದ್ದಾರೆ. ಸಂಗಣ್ಣ ಅವರಿದ್ದ ಕಾರು ಎದುರಿಗೆ ಬರುತ್ತಿದ್ದಂತೆ ಘೋಷಣೆಗಳನ್ನು ಕೂಗಿದರು.

ಪಟ್ಟಣದಲ್ಲಿ ಸಂಜೆ ಬಿಜೆಪಿ ರೋಡ್‌ ಶೋ ಆಯೋಜನೆಯಾಗಿತ್ತು. ಇದಕ್ಕಾಗಿ ಸಾವಿರಾರು ಕಾರ್ಯಕರ್ತರು ಜಮಾವಣೆಯಾಗಿದ್ದರು. ರೋಡ್ ಶೋ ಸಾಗುವ ಮಾರ್ಗದ ರಸ್ತೆಗೆ ಬಂದ ಸಂಗಣ್ಣ ಎದುರು ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ಚದುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT