ಕೊಪ್ಪಳ: ಐಪಿಎಸ್ ಅಧಿಕಾರಿ ಯಶೋಧಾ ವಂಟಗೋಡಿ ಶುಕ್ರವಾರ ನಿರ್ಗಮಿತ ಎಸ್.ಪಿ. ಅರುಣಾಂಗ್ಶು ಗಿರಿ ಅವರಿಂದ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.

ಬಾಗಲಕೋಟೆ ಜಿಲ್ಲೆಯ ಯಶೋಧಾ ಈ ಹಿಂದೆ ದಕ್ಷಿಣ ಕನ್ನಡ ಹಾಗೂ ಕುಂದಾಪುರದಲ್ಲಿ ಡಿಎಸ್ಪಿಯಾಗಿ, ಹುಬ್ಬಳ್ಳಿಯಲ್ಲಿ ಎಸಿಪಿಯಾಗಿ, ದಾವಣಗೆರೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬೆಳಗಾವಿಯ ಕರ್ನಾಟಕ ಲೋಕಾಯುಕ್ತ ಎಸ್ಪಿಯಿಂದ ಇಲ್ಲಿಗೆ ವರ್ಗಾವಣೆಯಾಗಿದ್ದಾರೆ.

ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ‘ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರದೊಂದಿಗೆ ಕೆಲಸ ಮಾಡಲಾಗುವುದು’ ಎಂದರು.

ಕೊಪ್ಪಳ ಮತ್ತು ಗಂಗಾವತಿ ಡಿಎಸ್ಪಿಗಳಾದ ಶರಣಬಸಪ್ಪ ಸುಭೇದಾರ, ಶೇಖರಪ್ಪ ನಿಂಗಪ್ಪ ಎನ್, ಪೊಲೀಸ್ ಇನ್ಸ್ಟೆಕ್ಟರ್ಗಳಾದ ಸಂತೋಷ ಹಳ್ಳೂರ, ಸುರೇಶ, ನಿಂಗಪ್ಪ , ಮಂಜುನಾಥ, ಅಡಿವೇಶ ಮತ್ತು ಮಹಾಂತೇಶ ಸಜ್ಜನ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.