ಕೊಪ್ಪಳ: ‘ಇಲ್ಲಿನ ನೆಲ ಬಸವಾದಿ ಶರಣರ ನಡೆಯಲ್ಲಿ ಸಾಗುತ್ತಿದ್ದು, ಕೊಪ್ಪಳದ ಬಸವ ಜಯಂತಿ ರಾಜ್ಯದಲ್ಲಿ ಗಮನ ಸೆಳೆಯುತ್ತಿದೆ. ಪೂರ್ವಭಾವಿ ಸಭೆಯಲ್ಲಿ ಇಷ್ಟು ಬೃಹತ್ ಸಂಖ್ಯೆಯ ಜನ ಸೇರಿರುವುದನ್ನು ನೋಡಿದ್ದು ಖುಷಿಯಾಗಿದೆ. ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಲು ತಮ್ಮೆಲ್ಲರ ಸಹಕಾರ ಅಗತ್ಯ’ ಎಂದು ಭಾಲ್ಕಿಯ ಹಿರೇಮಠದ ಗುರುಬಸವ ಪಟ್ಟದ್ದೇವರು ಹೇಳಿದರು

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ವಿಶ್ವಗುರು ಬಸವೇಶ್ವರ ಟ್ರಸ್ಟ್, ರಾಷ್ಟ್ರೀಯ ಬಸವದಳ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ ಮತ್ತು ಕೊಪ್ಪಳದ ಬಸವ ಪರ ಸಂಘಟನೆಗಳ ಸಹಯೋಗದೊಂದಿಗೆ ಸೆ. 8ರಂದು ಕೊಪ್ಪಳದಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಕುರಿತು ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಾಸ್ತಾವಿಕವಾಗಿ ಜಾಗತಿಕ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಬಸವರಾಜ ಬಳ್ಳೊಳ್ಳಿ ಅವರು ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನದ ಧ್ಯೇಯ, ಉದ್ದೇಶಗಳು, ಅಭಿಯಾನದ ಹಿನ್ನೆಲೆ ಮತ್ತು ಯಶಸ್ವಿಯಾಗಿ ಈ ಅಭಿಯಾನ ಕೊಪ್ಪಳದಲ್ಲಿ ನೆರವೇರಿಸಲು ಬೇಕಾದ ಎಲ್ಲಾ ಪೂರ್ವ ಸಿದ್ಧತೆಯ ಕುರಿತು ವಿವರಿಸಿದರು.

ಸರ್ಕಾರಿ ವಕೀಲ ಬಿ.ಎಸ್. ಪಾಟೀಲ, ಶ್ರೀಶೈಲ ಪಟ್ಟಣಶೆಟ್ಟರು, ಎ.ಕೆ. ಮಹೇಶ ಕುಮಾರ, ಸಿದ್ದಣ್ಣ ಜತ್ಲಿ, ವೀರಣ್ಣ ಅರಹುಣಸಿ, ಚನ್ನಬಸವಣ್ಣ ಕೊಟಗಿ, ಮಾಜಿ ಶಾಸಕ ಶರಣಪ್ಪ, ಟಿ ಬಸವರಾಜ, ಮಲ್ಲಿಕಾರ್ಜುನ ಬಳ್ಳೊಳ್ಳಿ, ಗುರುರಾಜ ಹಲಗೇರಿ, ಸತೀಶ ಕೊತಬಾಳ, ಗಾಳೆಪ್ಪ ಕಡೆಮನಿ, ಆನಂದ ಅಳವಂಡಿ, ಗುಡದಪ್ಪ ಹಡಪದ, ವೀರಣ್ಣ ಚಾಕಲಬ್ಬಿ, ಮಹೇಶ ಬಳ್ಳಾರಿ, ನಿರ್ಮಲಾ ಬಳ್ಳೊಳ್ಳಿ, ಅಪರ್ಣ ಬಳ್ಳೊಳ್ಳಿ, ಮಹಾಸಭಾದ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ಕಾರ್ಯದರ್ಶಿ ರಾಜೇಶ ಸಸಿಮಠ, ಯುವ ಘಟಕದ ಅಧ್ಯಕ್ಷ ಶೇಖರ ಇಂಗಳದಾಳ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.