ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಜಿಲ್ಲೆಯಲ್ಲಿ ಭಗೀರಥ ಮಹರ್ಷಿ ಸ್ಮರಣೆ

ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅಗತ್ಯ: ಪರಣ್ಣ ಶಾಸಕ ಮುನವಳ್ಳಿ ಅಭಿಮತ
Last Updated 8 ಮೇ 2022, 16:15 IST
ಅಕ್ಷರ ಗಾತ್ರ

ಗಂಗಾವತಿ: ಭಗೀರಥ ಮಹರ್ಷಿಗಳ ಆದರ್ಶ ಜೀವನ ಎಲ್ಲರಿಗೂ ಮಾರ್ಗದರ್ಶನ. ಅವರ ತತ್ವಗಳು ಕೇವಲ ಒಂದೇ ಸಮಾಜಕ್ಕೆ ಸೀಮಿತವಾಗಿರಲ್ಲ ಎಂಬುದು ಜನರು ಅರಿಯಬೇಕು ಎಂದು ಶಾಸಕ ಪರಣ್ಣ ಹೇಳಿದರು.

ಇಲ್ಲಿನ ಮುರಹರಿ ನಗರದ ಸೀತಾ ರಾಮಾಂಜನೇಯ ದೇವಸ್ಥಾನದಲ್ಲಿ ಶನಿವಾರ ಭಗೀರಥ ಉಪ್ಪಾರ ಸಮಾಜ ವತಿಯಿಂದ ನಡೆದ ಭಗೀರಥ ಮಹರ್ಷಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ಸಮಾಜ ಇರಲಿ ಶೈಕ್ಷಣಿಕವಾಗಿ ಬೆಳೆದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಬದುಕಿನಲ್ಲಿ ಶ್ರೀಮಂತಿಕೆ, ಬಡತನ ಎಂದಿಗೂ ಶಾಶ್ವತವಲ್ಲ. ಯಾವ ಕುಟುಂಬ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುತ್ತದೆಯೋ, ಆ ಕುಟುಂಬ ಎಲ್ಲ ರೀತಿಯಲ್ಲಿ ಅಭಿವೃದ್ಧಿ ಹೊಂದಲಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ ಮಾತನಾಡಿ, ಭಗೀರಥಿ ಮಹರ್ಷಿಗಳು ಮಾನವ ಜೀವನಕ್ಕೆ ಸ್ಪೂರ್ತಿ. ಗಂಗೆಯ ಇನ್ನೊಂದು ರೂಪವೇ ಭಗೀರಥಿ. ತಾಲ್ಲೂಕಿನಲ್ಲಿ ಶಾಸಕ ಪರಣ್ಣ ಮತ್ತು ನಮ್ಮ ನೇತೃತ್ವದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೊಳ್ಳಲಾಗಿದೆ. ನೀರು ಕುಡಿಯುವ ಪ್ರತಿಯೊಬ್ಬ ವ್ಯಕ್ತಿಯು ಭಗೀರಥ ಮಹರ್ಷಿಯನ್ನು ನೆನಸಬೇಕು. ಹಾಗೇ ಈ ಉಪ್ಪಾರ ಸಮಾಜದ ಅಭಿವೃದ್ಧಿಗೆ ನಮ್ಮ ಕುಟುಂಬ ಎಂದಿಗೂ ಅಬಾರಿಯಾಗಿ ಇರುತ್ತದೆ ಎಂದರು.

ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ಪ್ರತಿ ವರ್ಷ ಭಗೀರಥ ಜಯಂತಿ ಆಚರಿಸುತ್ತಾ ಬರಲಾಗಿದೆ. ಎಲ್ಲರ ಹಿತವನ್ನು ಬಯಸುವ ಸಮಾಜವಾಗಿದೆ. ಮುಂದಿನ ದಿನಮಾನಗಳಲ್ಲಿ ಸಮಾಜ ಇನ್ನೂ ಹೆಚ್ಚಿನದಾಗಿ ಅಭಿವೃದ್ಧಿ ಹೊಂದಬೇಕು ಎಂದರು.

ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ, ಸಹಸ್ರಾರು ವರ್ಷಗಳ ಕಾಲ ತಪಸ್ಸು ಮಾಡಿ, ಗಂಗೆಯನ್ನು ಧರೆಗಿಳಿಸಿದ ಮಹಾನ್ ಪುಣ್ಯಾತ್ಮ ಈ ಭಗೀರಥ ಮಹರ್ಷಿ. ಅಂತಹ ಮಹರ್ಷಿ ಜೀವನ ತತ್ವಗಳು ಅಳವಡಿಸಿಕೊಳ್ಳಬೇಕು. ಯಾವವ್ಯಕ್ತಿ ಜೀವನದಲ್ಲಿ ನಿಜವಾಗಿ ಶ್ರಮ ಪಡುತ್ತಾನೋ, ಎಷ್ಟೇ ಕಷ್ಟಗಳು ಬಂದರೂ ಎಡೆಬಿಡದೆ, ಭಗೀರಥ ಪ್ರಯತ್ನ ಮಾಡುತ್ತಾನೋ ಆ ವ್ಯಕ್ತಿ ಮಾತ್ರ ಜೀವನದಲ್ಲಿ ಸಾಧನೆ ಮಾಡುತ್ತಾನೆ ಎಂದರು.

ಇದಕ್ಕೂ ಮುನ್ನ ಭಗೀರಥ ವೃತ್ತದಲ್ಲಿ ಭಗೀರಥ ಮಹರ್ಷಿಯ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ನಂತರ ಬಿ.ಎ ಪದವಿಯಲ್ಲಿ ಚಿನ್ನದ ಪದಕ ಪಡೆದ ಮರಳಿ ಗ್ರಾಮದ ಶರಣಮ್ಮ ಎಂಬ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. ಉಪ್ಪಾರ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆಯಲ್ಲಿ ವಿರುಪಾಕ್ಷಪ್ಪ ಸಿಂಗನಾಳ, ಚೆನ್ನಪ್ಪ ಮಳಗಿ, ನಗರ ಪ್ರಾಧಿಕಾರದ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಮಾಜಿ ಶಾಸಕ ಜಿ.ವೀರಪ್ಪ ಮಾತನಾಡಿ, ಗ್ರೇಡ್-2 ತಹಶೀಲ್ದಾರ್ ವಿ.ಎಚ್.ಹೊರಪೇಟಿ, ಗಿರೆಗೌಡರು, ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಅಮರಜ್ಯೊತಿ ವೆಂಟೇಶ, ನಗರಸಭೆ ಸದಸ್ಯ ನವೀನ್ ಮಾಲಿ ಪಾಟೀಲ, ವಾಸುದೇವ ನವಲಿ, ಶರಭೋಜಿರಾವ್, ಸಿದ್ದಲಿಂಗಯ್ಯ, ಧನಂಜಯ,ರೇಖಾ ರಾಯಬಾಗಿ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT