ಶುಕ್ರವಾರ, ಜುಲೈ 30, 2021
21 °C

ಬಂಡಿಹರ್ಲಾಪುರ: 280 ಜನರಿಗೆ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಡಿಹರ್ಲಾಪುರ (ಮುನಿರಾಬಾದ್): ಸಮೀಪದ ಬಂಡಿಹರ್ಲಾಪುರ ಗ್ರಾಮದಲ್ಲಿ ಮಂಗಳವಾರ ನಡೆದ ಕೋವಿಡ್ ಲಸಿಕಾ ಅಭಿಯಾನದಲ್ಲಿ 280 ಜನ ಲಸಿಕೆ ಪಡೆದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಆರೋಗ್ಯ ಇಲಾಖೆ ಮತ್ತು  ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆರೋಗ್ಯ ಉಪ ಕೇಂದ್ರದಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಗ್ರಾಮದ ಮುಖಂಡ ಕಾಶಯ್ಯ ಸ್ವಾಮಿ ಮಾತನಾಡಿ,‘ರೋಗ ಬಂದ ಮೇಲೆ ನರಳುವುದಕ್ಕಿಂತ ಮುಂಚಿತವಾಗಿ ಲಸಿಕೆ ಪಡೆದು ರೋಗನಿರೋಧಕ ಶಕ್ತಿ ಪಡೆದುಕೊಳ್ಳಬೇಕು’ ಎಂದರು.

ಉಪ ತಹಶೀಲ್ದಾರ್ ರೇಖಾ ದೀಕ್ಷಿತ್ ಮಾತನಾಡಿ,‘ಕೋವಿಡ್ ಮಣಿಸಲು ಸದ್ಯ ಲಸಿಕೆಯೊಂದೇ ಪರಿಹಾರ’ ಎಂದು ಮನವಿ ಮಾಡಿದರು. ಗ್ರಾ.ಪಂ. ಅಧ್ಯಕ್ಷ ಚನ್ನಕೃಷ್ಣ ಮಾತನಾಡಿದರು. ವೈದ್ಯಾಧಿಕಾರಿಗಳಾದ ಡಾ.ಮಾಧುರಿ, ಡಾ.ಮಂಜುಳಾ ಶರ್ಮಾ, ಕಂದಾಯ ನಿರೀಕ್ಷಕ ಬಸವರಾಜ ಬನ್ನಿಕೊಪ್ಪ, ಪಿಡಿಒ ಮಂಜುಳಾ ಪಾಟೀಲ್, ಗ್ರಾಮ ಲೆಕ್ಕಾಧಿಕಾರಿ ಲಲಿತಾ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು