ಸೋಮವಾರ, ಜನವರಿ 20, 2020
19 °C
ಐವರಿಗೆ ಎರಡು ವರ್ಷ ಜೈಲು ಶಿಕ್ಷೆ

ಬಾಲ್ಯವಿವಾಹ: ಗ್ರಾ ಪಂ ಅಧ್ಯಕ್ಷನಿಗೆ ₹ 20 ಸಾವಿರ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಕನೂರು: ತಾಲ್ಲೂಕಿನ ಅರಕೇರಿ ಗ್ರಾಮದಲ್ಲಿ ನಡೆದಿದ್ದ ಬಾಲ್ಯವಿವಾಹ ಪ್ರಕರಣದ ಆರೋಪಿಗಳಿಗೆ ಯಲಬುರ್ಗಾ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯವು ಎರಡು ವರ್ಷ ಕಠಿಣ ಶಿಕ್ಷೆ ಹಾಗೂ ತಲಾ ಹತ್ತು ಸಾವಿರ ದಂಡ ವಿಧಿಸಿದೆ.

ಗ್ರಾಮದಲ್ಲಿ 2013ರ ಜ.8ರಂದು ಬಾಲಕಿಯ ವಿವಾಹ ನೆರವೇರಿಸಲಾಗಿತ್ತು. ಯಲಬುರ್ಗಾ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶೆ ಶುಭಾ ಅವರು, ವರ, ವಧುವಿನ ತಾಯಿ, ಚಿಕ್ಕಮ್ಮ ಹಾಗೂ ಚಿಕ್ಕಪ್ಪ ಶಿಕ್ಷೆ ವಿಧಿಸಿದ್ದಾರೆ.

ವಿವಾಹ ತಡೆಯಲು ಹೋದ ಅಧಿಕಾರಿಗಳಿಗೆ ಯಾಮಾರಿಸಿ ಮದುವೆ ಮಾಡಿಸಿದ್ದ ಅಂದಿನ ಅರಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ ಜುಮ್ಮಣ್ಣನವರ್ ಅವರಿಗೆ ಎರಡು ವರ್ಷ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.

ಪ್ರತಿಕ್ರಿಯಿಸಿ (+)