ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮುನಿಸು ಶಮನಕ್ಕೆ ಸಿಎಂ ಸಿದ್ದರಾಮಯ್ಯ ಯತ್ನ

Published 3 ಮಾರ್ಚ್ 2024, 4:14 IST
Last Updated 3 ಮಾರ್ಚ್ 2024, 4:14 IST
ಅಕ್ಷರ ಗಾತ್ರ

ಗಂಗಾವತಿ (ಕೊಪ್ಪಳ): ಜಿಲ್ಲೆಯ ಪಕ್ಷದ ಕೆಲ ನಾಯಕರ ವರ್ತನೆಯಿಂದಾಗ ಬೇಸರಗೊಂಡಿದ್ದ‌ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಮುನಿಸು ಶಮನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಿಸಿದರು.

ಶನಿವಾರ ರಾತ್ರಿ ತನಕ ಕನಕಗಿರಿ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ತಡರಾತ್ರಿ ಅನ್ಸಾರಿ ಅವರ ಗಂಗಾವತಿ‌ ನಿವಾಸಕ್ಕೆ ತೆರಳಿದರು.

ಅನ್ಸಾರಿ ಕುಟುಂಬದ ಜೊತೆ ಕೆಲ ಹೊತ್ತು ಸಮಯ ಕಾಲ ಕಳೆದ ಬಳಿಕ ಗೌಪ್ಯವಾಗಿ ಚರ್ಚೆ ನಡೆಸಿದರು. ಬಳಿಕ ಅನ್ಸಾರಿಯ ಮೊಮ್ಮಗಳು ಸಿಂಜಾ ಫಾತಿಮಾ ಜೊತೆ ಆಟವಾಡಿದರು.

'ಪುಟ್ಟ ಮಗುವಿನ ಜೊತೆ ಕಳೆದ ಕೆಲ ಕ್ಷಣ ದಿನದ ದಣಿವು ಮರೆಸಿತು' ಎಂದು ಮುಖ್ಯಮಂತ್ರಿ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಇತ್ತೀಚೆಗೆ ಅನ್ಸಾರಿ ಹೇಳಿಕೆ ನೀಡಿದ್ದರು‌. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇನೆ ಎಂದೂ ಗುಡುಗಿದ್ದರು. ಇದು‌ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಭೇಟಿ ಮೂಲಕ ಸಿದ್ದರಾಮಯ್ಯ ಅವರು ಅನ್ಸಾರಿ ಮುನಿಸು ಶಮನ ಮಾಡಿದ್ದಾರೆ. ಪಕ್ಷ ಯಾವಾಗಲೂ ನಿಮ್ಮೊಂದಿಗೆ ಇರಲಿದೆ ಎನ್ನುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT