ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಜಂಪ್‌ರೋಪ್‌ ಸ್ಪರ್ಧೆ: ಕುಷ್ಟಗಿ ಮಂಜುನಾಥ್ ಚೌಡ್ಕಿಗೆ 2 ಚಿನ್ನದ ಪದಕ

Published : 15 ಸೆಪ್ಟೆಂಬರ್ 2024, 15:37 IST
Last Updated : 15 ಸೆಪ್ಟೆಂಬರ್ 2024, 15:37 IST
ಫಾಲೋ ಮಾಡಿ
Comments

ಕುಷ್ಟಗಿ: ಮಹಾರಾಷ್ಟ್ರದ ನಾಂದೇಡದಲ್ಲಿ ಸೆ.12-14ರವರೆಗೆ ನಡೆದ 21ನೇ ಸಬ್‌ ಜ್ಯೂನಿಯರ್ ಜಂಪರೋಪ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪಟ್ಟಣದ ಮಂಜುನಾಥ ಚೌಡ್ಕಿ ಎರಡು ಚಿನ್ನದ ಪದಕ ಗೆದ್ದಿದ್ದಾರೆ.

ಕರ್ನಾಟಕವನ್ನು ಪ್ರತಿನಿಧಿಸಿದ್ದ ಜಂಪರೋಪ್‌ ತಂಡದಲ್ಲಿನ 15 ಕ್ರೀಡಾಪಟುಗಳು ಒಟ್ಟು 6 ಚಿನ್ನ, 10 ಬೆಳ್ಳಿ ಹಾಗೂ 1 ಕಂಚು ಸೇರಿ ಒಟ್ಟು 17 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಎರಡು ಚಿನ್ನದ ಪಡೆಯುವ ಮೂಲಕ ಪಟ್ಟಣದ ಮಂಜುನಾಥ್ ಗಮನಸೆಳೆದಿದ್ದಾರೆ. ರಾಜ್ಯ ತಂಡದ ಪರವಾಗಿ ಎಂ.ರವಿಕುಮಾರ ನಿರ್ಣಾಯಕರಾಗಿದ್ದರು. ತಂಡದ ಕೋಚ್‌ ವಸಂತಕುಮಾರ, ರಾಜ್ಯ ತಂಡದ ವ್ಯವಸ್ಥಾಪಕ ಶಿವಪ್ಪ ಹಾಗೂ ರಾಜ್ಯ ಜಂಪ್‌ರೋಪ್‌ ಸಂಘಟನೆ ಕಾರ್ಯದರ್ಶಿ ಅಬ್ದುಲ್‌ ರಜಾಕ್‌ ಟೇಲರ್ ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT