25ನೇ ಆವೃತ್ತಿಯ ಕಾರ್ಯಕ್ರಮ ನಾಳೆ
ಕೊಪ್ಪಳ: ‘ಮಣ್ಣಿನೊಂದಿಗೆ ಮಾತುಕತೆ’ಯ 25ನೇ ಆವೃತ್ತಿ ಮ್ಯಾದನೇರಿ ಕ್ರಾಸ್ ಬಳಿಯ ಆಚಾರ ತಿಮ್ಮಾಪುರದ ‘ಶ್ರೀ ಫಾರ್ಮ್’ನಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಜರುಗಲಿದೆ. ಈವರೆಗೆ ಆತಿಥ್ಯ ವಹಿಸಿರುವ 24 ಸಾವಯವ ರೈತರ ಪರಿಚಯದ ಕೈಪಿಡಿ ಬಿಡುಗಡೆ ಬೇಸಲ್ ಡೋಸ್ ಹಾಗೂ ಇನ್ನಿತರ ಕೃಷಿ ಒಳಸುರಿ ಪ್ರಾತ್ಯಕ್ಷಿಕೆ ‘ಜವಾರಿ ಸೀಡ್ ಬ್ಯಾಂಕ್’ಗೆ ಚಾಲನೆ `ಕೃಷಿ ಪ್ರವಾಸೋದ್ಯಮ ಸಾಧ್ಯತೆ’ ಕಾರ್ಯಾಗಾರ ನಡೆಯಲಿವೆ. ಮಾತುಕತೆ’ಯಲ್ಲಿ ಪಾಲ್ಗೊಳ್ಳುವವರು ಮೊ: 9945514000 ಮೂಲಕ ಸಂದೇಶ ಕಳಿಸಿ ನೋಂದಣಿ ಮಾಡಿಕೊಳ್ಳಬಹುದು ಸಂಘಟಕರು ತಿಳಿಸಿದ್ದಾರೆ.