ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ದೆ ಇಲ್ಲದೇ ಜನರ ಸೇವೆ

Last Updated 7 ಜೂನ್ 2020, 13:50 IST
ಅಕ್ಷರ ಗಾತ್ರ

ಗಂಗಾವತಿ: ಲಾಕ್‌ಡೌನ್‌ ಸಮಯದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ. ನಿದ್ದೆಯಿಲ್ಲದೆ, ನಮಗೆ ವಹಿಸಿದ ಏರಿಯಾಗಳಲ್ಲಿ ದಿನವೀಡಿ ಸಂಚರಿಸಿ ಕೊರೊನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಬೇರೆ ಊರುಗಳಿಂದ ಆಗಮಿಸುವ ಜನರನ್ನು ಕರೆದುಕೊಂಡು ಹೋಗಿ ಅವರನ್ನು ತಪಾಸಣೆಗೆ ಒಳಪಡಿಸಿದ್ದೇವೆ. ಜನರು ಕೂಡ ಸಾಕಷ್ಟು ಸಹಕಾರ ಕೊಟ್ಟಿದ್ದಾರೆ.

ಆದರೆ, ವಿದೇಶದಿಂದ ಬಂದವರ ಮನೆಗೆ ಹೋಗಿ ಅವರ ಮಾಹಿತಿ ಕಲೆಹಾಕುವುದಕ್ಕೆ ತುಂಬಾ ಭಯವಾಗುತ್ತಿತ್ತು. ಅಂತಹ ಸಂದರ್ಭದಲ್ಲೂ ಧೃತಿಗೆಡದೇ, ಕಾರ್ಯನಿರ್ವಹಿಸಿದ ಹೆಮ್ಮೆ ನಮಗಿದೆ. ಮನೆಗೆ ಬಂದಾಗ ಕಡ್ಡಾಯವಾಗಿ ಸ್ಯಾನಿಟೈಜರ್‌, ಹ್ಯಾಂಡ್‌ ವಾಶ್‌ ಮಾಡಿಕೊಂಡೆ ಒಳಗೆ ಪ್ರವೇಶ ಮಾಡುತ್ತಿದ್ದೇವು. ಆದರೂ ಎಷ್ಟೇ ಮುಂಜಾಗ್ರತೆ ಕ್ರಮಕೈಗೊಂಡರೂ ಮನೆಯಲ್ಲಿನ ಮಕ್ಕಳನ್ನು ಮುಟ್ಟುವುದಕ್ಕೂ ನಮಗೆ ಭಯವಾಗುತ್ತಿತ್ತು. ಈ ಕೊರೊನಾ ವೈರಸ್‌ ನಿಂದ ಸಾಕಷ್ಟು ಪಾಠ ಕಲಿತಿದ್ದೇವೆ. ಕೊರೊನಾ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ತೃಪ್ತಿ ತಂದಿದ್ದು, ನಾನೊಬ್ಬ ಆಶಾ ಕಾರ್ಯಕರ್ತೆ ಎಂಬುದಕ್ಕೆ ಹೆಮ್ಮೆ ಇದೆ.

–ಕೆ.ಲಲಿತಾ, ಆಶಾ ಕಾರ್ಯಕರ್ತೆ, ಗಂಗಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT