ಗುರುವಾರ , ಆಗಸ್ಟ್ 5, 2021
27 °C

ತಾವರಗೇರಾ: ಬೆಳೆ ನಾಶ, ರೈತನಿಗೆ ಶಾಸಕ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಾವರಗೇರಾ: ಕಳ್ಳರು ಹಾಗಲಕಾಯಿ ಕಿತ್ತುಕೊಂಡು ಹೋಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿರುವ ಸಮೀಪದ ಬಚನಾಳ ಗ್ರಾಮದ ರೈತ ಪಂಪಯ್ಯ ಅವರ ಹೊಲಕ್ಕೆ ಶಾಸಕ ಅಮರೇಗೌಡ ಬಯ್ಯಾಪುರ ಭಾನುವಾರ ಭೇಟಿ ನೀಡಿದರು. ₹10 ಸಾವಿರ ವೈಯಕ್ತಿಕ ‍ಪರಿಹಾರ ನೀಡಿದರು.

ಈ ಸಂಬಂಧ ‘ಪ್ರಜಾವಾಣಿ’ಯ ಜುಲೈ 11 ರ ಸಂಚಿಕೆಯಲ್ಲಿ ‘ಬಚನಾಳ: ಹಾಗಲಕಾಯಿ ಕಳವು’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.

ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ,‘ರೈತರ ಬೆಳೆ ಕಿತ್ತುಕೊಂಡು ಹೋಗಿರುವುದು ನಾಚಿಕೆಗೇಡಿನ ಸಂಗತಿ. ನಮ್ಮ ರೈತರು ಕಷ್ಟಪಟ್ಟು ಸಾಲ ಮಾಡಿ ಬೆಳೆ ಬೆಳೆದಿರುತ್ತಾರೆ. ಇಂಥ ಘಟನೆಗಳಿಂದ ಅವರ ಕುಟುಂಬಕ್ಕೆ ನಷ್ಟವಾಗುತ್ತಿದೆ. ಕಿಡಿಗೇಡಿಗಳನ್ನು ಪತ್ತೆಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದರು.

ರೈತ ಪಂಪಯ್ಯ, ಮರಿಯಪ್ಪ ವಕೀಲ ಹಾಗೂ ಲಿಂಗದಹಳ್ಳಿ ರೈತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು