ಯಲಬುರ್ಗಾ: ‘ವಿವಿಧ ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕರು, ಕಾಯಂ ಸಿಬ್ಬಂದಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಒಂದು ವಾರದಿಂದಲೂ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಕೂಡಲೇ ಈಡೇರಿಸಬೇಕು’ ಎಂದು ಯಲಬುರ್ಗಾ ವಸತಿ ಶಾಲಾ ನೌಕರರ ಸಂಘದ ವತಿಯಿಂದ ಸ್ಥಳೀಯ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.

‘ರಾಜ್ಯದಲ್ಲಿ 830 ವಸತಿ ಶಾಲೆಗಳಿದ್ದು, ಅದರ ಅಡಿಯಲ್ಲಿ 8 ಸಾವಿರ ಕಾಯಂ ಉಪನ್ಯಾಸಕಯ ಕಳೆದ 13 ವರ್ಷಗಳಿಂದಲೂ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಅವರಿಗೆ ನ್ಯಾಯವಾಗಿ ಸಿಗಬೇಕಾದ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿಲ್ಲ. ಈ ಕಾರಣದಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಅದರ ಮುಂದುವತಿದ ಭಾಗವಾಗಿ ಕಪ್ಪು ಬಟ್ಟೆ ಧರಿಸಿ ಶಾಲೆಗಳಲ್ಲಿ ಪ್ರತಿಭಟನೆಯನ್ನು ವ್ಯಕ್ತಪಡಿಸಲಾಗಿದೆ. ಈಗ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುತ್ತಿದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕೆಜಿಐಡಿ ಸೌಲಭ್ಯ, ವಸತಿ ನಿರ್ದೇಶನಾಲಯ, ಡಿಸಿಆರ್ಜಿ ಸೌಲಭ್ಯ, ಶೇ 10ರಷ್ಟು ಹೆಚ್ಚುವರಿ ವೇತನ, ಗೃಹ ಬಾಡಿಗೆ ವಿನಾಯಿತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಕೋರಲಾಗಿದೆ.

ನೌಕರರ ಸಂಘದ ಪದಾಧಿಕಾರಿಗಳಾದ ಕಳ್ಳಿನಾಥಯ್ಯ ಹಿರೇಗೌಡ್ರ, ದ್ಯಾಮಪ್ಪ ರಾಜೂರ್, ಹನಮಪ್ಪ ಉಪ್ಪಾರ್, ರವೀಂದ್ರ ಮಾಳೆಕೊಪ್ಪ, ಪ್ರಾಚಾರ್ಯ ವಿರೂಪಾಕ್ಷಪ್ಪ ಹನಮಶೆಟ್ಟಿ, ವಿಜಯಕುಮಾರ್ ದೊಡ್ಡಮನಿ, ಹನಮಂತ ಕಡೆಕೊಪ್ಪ, ಶಶಿಧರ್, ಶಾಂತಂವೀರಯ್ಯ ಬಲವಂಚಿಮಠ, ಮಲ್ಲಿಕಾರ್ಜುನ ಅಂಗಡಿ, ಕಳಕೇಶ್ ಆರಕೇರಿ, ತೆಲಕರ್ ಸೇರಿ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.