‘ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ’
ಕೊಪ್ಪಳ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಉಪನ್ಯಾಸಕ ಸಿದ್ದಲಿಂಗಪ್ಪ ಕೊಟ್ನೆಕಲ್ ಅವರು ಉಪನ್ಯಾಸ ನೀಡಿ‘ಅರಸು ಅವರು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ಪ್ರತಿಭಾನ್ವಿತ ಸಂಸದೀಯ ಪಟು. ಮೌನ ಸಾಮಾಜಿಕ ಕ್ರಾಂತಿಯ ಶಿಲ್ಪಿಯಾಗಿದ್ದರು’ ಎಂದು ಸ್ಮರಿಸಿದರು. ‘ಯಾವುದೇ ಅಹಂಭಾವ ತೋರಿಸದೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅಂದಿನ ಕಾಲದಲ್ಲಿ ಅವರ ಚುನಾವಣೆಗಾಗಿ ಜನರೇ ಹಣ ಸಂಗ್ರಹಿಸಿ ಕೊಡುತ್ತಿದ್ದರು. ಅಂಥ ವ್ಯಕ್ತಿತ್ವ ಅವರದಾಗಿತ್ತು’ ಎಂದರು.