ಗುರುವಾರ , ಮಾರ್ಚ್ 23, 2023
31 °C

ಸಂಘಗಳಿಗೆ ಲಾಭಾಂಶ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುನಿರಾಬಾದ್: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ತಂಡಗಳಿಗೆ ಲಾಭಾಂಶ ವಿತರಣೆ ಕಾರ್ಯಕ್ರಮ ಕಂಪಸಾಗರ ಗ್ರಾಮದಲ್ಲಿ ಶುಕ್ರವಾರ ನಡೆಯಿತು.

ಸಂಸ್ಥೆಯ ಹಿಟ್ನಾಳ ವಲಯ ಮೇಲ್ವಿಚಾರಕ ಎ.ಮಹಾಂತೇಶ ಮಾತನಾಡಿ, ‘ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 2,925 ಸಂಘಗಳಿದ್ದು, ₹ 4.89 ಕೋಟಿ ಲಾಭಾಂಶ ವಿತರಿಸಲಾಗುತ್ತಿದೆ. ಹಿಟ್ನಾಳ ವಲಯ ವ್ಯಾಪ್ತಿಯ ಕಂಪಸಾಗರ ಕಾರ್ಯಕ್ಷೇತ್ರದಲ್ಲಿ ಒಟ್ಟು 20 ತಂಡಗಳಿಗೆ ₹.3.41ಲಕ್ಷ ಲಾಭಾಂಶವನ್ನು ಘೋಷಿಸಲಾಗಿದೆ’ ಎಂದರು.

‘ಹಿಟ್ನಾಳ ವಲಯ ವ್ಯಾಪ್ತಿಯಲ್ಲಿ 157 ತಂಡಗಳಿಗೆ ₹. 27.42 ಲಕ್ಷ ಹಣವನ್ನು ಲಾಭಾಂಶವೆಂದು ತೆಗೆದಿರಿಸಲಾಗಿದೆ. ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿ, ಸಾಲ ಪಡೆದು ಮತ್ತು ಮರುಪಾವತಿಸಿ ಉತ್ತಮ ವ್ಯವಹಾರ ನಡೆಸಿದ ಸಂಘಗಳಿಗೆ ಲಾಭಾಂಶವನ್ನು ನೀಡಲಾಗುತ್ತಿದೆ’ ಎಂದರು.

ಕಂಪಸಾಗರ ಗ್ರಾಮದ ಶ್ರೀಅನ್ನಪೂರ್ಣೆಶ್ವರಿ, ಶ್ರೀ ದುರ್ಗಾ, ಬಸವೇಶ್ವರ ಗಂಗಾಪರಮೇಶ್ವರಿ, ಗಂಗಾಪರಮೇಶ್ವರಿ, ನವಶಕ್ತಿವೈಭವ, ಮಹಾವೀರ ಹಾಗೂ ಶ್ರೀರಾಮ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಿಸಲಾಯಿತು. ಸೇವಾ ಪ್ರತಿನಿಧಿ ಕೆ.ಗೀತಾ ಮತ್ತು ಸಿಬ್ಬಂದಿ ಹುಚ್ಚಿರಪ್ಪ ವಿವಿಧ ಸಂಘಗಳ ಪದಾಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.