ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಜಾಲತಾಣದ ದುರ್ಬಳಕೆ ಬೇಡ: ಮಹಾಂತೇಶ ಸಜ್ಜನ

Published 14 ಅಕ್ಟೋಬರ್ 2023, 5:32 IST
Last Updated 14 ಅಕ್ಟೋಬರ್ 2023, 5:32 IST
ಅಕ್ಷರ ಗಾತ್ರ

ಅಳವಂಡಿ: ಯುವಕರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡುತ್ತಿದ್ದು, ಅವುಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಕೆಲವೊಂದು ಸೂಕ್ಷ್ಮ ವಿಷಯಗಳು ಆಶಾಂತಿಗೆ ಕಾರಣವಾಗುತ್ತಿವೆ. ಸಾಮಾಜಿಕ ಜಾಲತಾಣಕ್ಕೆ ಏನಾದರೂ ಹಾಕುವಾಗ ವಿಚಾರ ಮಾಡಬೇಕು ಎಂದು ಸಿಪಿಐ ಮಹಾಂತೇಶ ಸಜ್ಜನ ಹೇಳಿದರು.

ಗ್ರಾಮದ ಮರಿಯಮ್ಮ ದೇವಸ್ಥಾನದಲ್ಲಿ ಅಳವಂಡಿ ಪೋಲಿಸ ಠಾಣೆಯ ವತಿಯಿಂದ ನಡೆದ ಅಪರಾಧ ಪ್ರಕರಣ, ಕಳವು ಪ್ರಕರಣ ತಡೆಗಟ್ಟುವ ಹಾಗೂ ಸಾಮಾಜಿಕ ಜಾಲತಾಣದ ದುರ್ಭಳಕೆ ಹಾಗೂ ಇತರ ವಿಷಯದ ಕುರಿತು ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಸಾರ್ವಜನಿಕರು ಮನೆ ಬಿಟ್ಟಿ ಬೇರೆ ಊರಿಗೆ ತೆರಳಿದಾಗ ಪಕ್ಕದ ಮನೆಯವರಿಗೆ ಮಾಹಿತಿ ನೀಡಬೇಕು. ಪೋಲಿಸ್‌ ಠಾಣೆಗೆ ಮಾಹಿತಿ ನೀಡಿದರೆ, ಕಳ್ಳತನದ ಪ್ರಕರಣವನ್ನು ತಡೆಗಟ್ಟಬಹುದು. ಮನೆಯಲ್ಲಿ ಬೆಳೆಬಾಳುವ ವಸ್ತು ನಗದು ಹಣ ಇಡಬೇಡಿ. ಇವುಗಳ ರಕ್ಷಣೆಗೆ ಬ್ಯಾಂಕ್ ಲಾಕರನ್ನು ಬಳಸಬೇಕು. ಗ್ರಾಮದಲ್ಲಿ ಕಳ್ಳತನ ಪ್ರಕರಣ ನಡೆದರೆ, ಸ್ಥಳದಲ್ಲಿ ಯಾರೂ ಅಡ್ಡಾಡಬಾರದು. ಅಲ್ಲಿ ಯಾವುದೇ ವಸ್ತುವನ್ನು ಮುಟ್ಟಬಾರದು. ಇದು ಪ್ರಕರಣ ಪತ್ತಗೆ ಸಹಕಾರಿಯಾಗಲಿದೆ. ಯಾವುದೇ ಸಣ್ಣ ಪುಟ್ಟ ಸಮಸ್ಯಗಳನ್ನು ದೊಡ್ಡದಾಗಿ ಬಿಂಬಿಸಬೇಡಿ. ಇದು ನಮ್ಮ ಒಗ್ಗಟ್ಟನ್ನು ಹಾಳು ಮಾಡಲಿದೆ. ಶಾಂತಿ ಸೌಹಾರ್ದದಿಂದ ಬಾಳಿದರೆ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಪಿಎಸ್‌ಐ ನಾಗಪ್ಪ, ಮಾರ್ತಾಂಡಪ್ಪ, ಎಎಸ್‌ಐ ನೀಲಕಂಠಪ್ಪ, ಚಂದ್ರು, ಗವಿಸಿದ್ದಪ್ಪ, ಅಮರೇಗೌಡ, ಲೋಕೇಶ, ಮಹೇಶ, ನಿಂಗಪ್ಪ, ಮಲ್ಲೇಶ, ಸಂತೋಷ ಗ್ರಾಮಸ್ಥರಾದ ಮೈಲಾರಪ್ಪ, ಪ್ರಕಾಶ, ಮಂಜು, ಪರಶುರಾಮ, ಅಣ್ಣಪ್ಪ, ಪಕೀರಪ್ಪ, ಮಂಜಪ್ಪ, ಅಜ್ಜಪ್ಪ, ಬಸವರಾಜ, ಶಿದ್ಲಿಂಗ, ಮಾರುತಿ, ರಮೇಶ, ಮರಿಯಪ್ಪ, ದುರಗಪ್ಪ, ಯಮನೂರಪ್ಪ, ಅಣ್ಣಪ್ಪ, ಮಾರುತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT