ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಕಾಲೀನ ಸಮಸ್ಯೆ ಬಿಂಬಿಸುವ ಕಂಬಾರರ ನಾಟಕಗಳು

Published : 30 ಜುಲೈ 2023, 15:16 IST
Last Updated : 30 ಜುಲೈ 2023, 15:16 IST
ಫಾಲೋ ಮಾಡಿ
Comments

ಅಳವಂಡಿ: ಡಾ.ಚಂದ್ರಶೇಖರ ಕಂಬಾರರ ನಾಟಕಗಳು ಸಮಕಾಲೀನ ಸಮಸ್ಯೆಗಳನ್ನು ಬಿಂಬಿಸುತ್ತವೆ. ಅವರು ಅನೇಕ ನಾಟಕಗಳನ್ನು ರಚಿಸಿ, ಭಾರತೀಯ ರಂಗಭೂಮಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ಪ್ರಾಚಾರ್ಯ ಹನುಮಂತಪ್ಪ ಅಂಡಗಿ ಹೇಳಿದರು.

ಸಮೀಪದ ಹಿರೇಸಿಂದೋಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಡಾ.ಚಂದ್ರಶೇಖರ ಕಂಬಾರ ಅವರ ಬೆಪ್ಪು ತಕ್ಕಡಿ, ಬೋಳೆಶಂಕರ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಕಂಬಾರರ ನಾಟಕಗಳಲ್ಲಿ ಜಾನಪದ ಹಾಗೂ ಅಧುನಿಕ ನಾಟಕೀಯ ಪ್ರಕಾರಗಳ ಮಿಶ್ರಣವಿದೆ. ಕನ್ನಡ ಸಾಹಿತ್ಯಕ್ಕೆ 8ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕನ್ನಡ ಸಾಹಿತ್ಯದ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಸಿರಿಸಂಪಿಗೆ, ತಿರುಕನ ಕನಸು, ಶಿವರಾತ್ರಿ, ಋಷ್ಯಶೃಂಗ, ಜೋಕುಮಾರಸ್ವಾಮಿ, ಸಂಗ್ಯಾ ಬಾಳ್ಯಾ, ಬೋಳೆ ಶಂಕರ ಮುಂತಾದ ನಾಟಕ ರಚಿಸಿ, ರಂಗಭೂಮಿಗೆ ಕೊಡುಗೆ ನೀಡಿದ್ದಾರೆ ಎಂದರು.

ಉಪನ್ಯಾಸಕ ವೀರಶೇಖರ ಪತ್ತಾರ ಮಾತನಾಡಿ, ಇಂದು ಮಹಾವಿದ್ಯಾಲಯದಲ್ಲಿ ಪ್ರದರ್ಶನಗೊಂಡ ನಾಟಕಗಳ ಪ್ರತಿಯೊಂದು ಪಾತ್ರಗಳು ಜೀವಂತವಾಗಿದ್ದವು. ಮಕ್ಕಳಿಗೆ ಮನನವಾಗಿದ್ದು, ರಂಜನೀಯವಾಗಿದ್ದವು. ನಾಟಕ ಪಠ್ಯಕ್ಕೆ ಪೂರಕವಾಗಿದ್ದು, ವಿದ್ಯಾರ್ಥಿಗಳ ಮನಸ್ಸಿಗೆ ಅಚ್ಚೊತ್ತಿವೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ, ವೈಯಕ್ತಿಕ ಪ್ರಜ್ಞೆ ಎಚ್ಚರಗೊಳಿಸುವಂತೆ ಇದ್ದವು ಎಂದರು.

ನಾಟಕದ ನಿರ್ದೇಶಕ, ರಂಗಕರ್ಮಿ, ರಂಗದಾರ ರೆಪರ್ಟಿ ಸಂಚಾಲಕ ಲಕ್ಷ್ಮಣ ಪೀರಗಾರ ಮಾತನಾಡಿದರು. ಉಪನ್ಯಾಸಕ ವೀರಣ್ಣ ಜೋಗಿನ, ಐ.ಎನ್. ಪಾಟಲ, ಅನಿತಾ ಧಲಬಂಜನ, ಗುಜ್ಜಲ ಆಂಜನೇಯ, ಜಯಪಾಲರಡ್ಡಿ, ಸಂಗೀತ ಬೀಳಗಿಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT