ಕೊಪ್ಪಳ: ಡ್ರಗ್ಸ್ ವಿಷಯಕ್ಕೆ ಸಂಬಂಧಿಸಿದಂತೆ ನಟಿಯರನ್ನು ಹೆಚ್ಚು ಉಪಯೋಗ ಮಾಡಿದ್ದು ತಪ್ಪು. ಸರ್ಕಾರ ಹಾಗೂ ಮಾಧ್ಯಮ ಇದನ್ನು ಮಾಡಬಾರದಾಗಿತ್ತು. ನಟಿಯರು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಅವರು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಸಿನಿಮಾ ಮಾಡಿದ್ದಾರೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ನಗರದಲ್ಲಿಶನಿವಾರಪತ್ರಕರ್ತರೊಂದಿಗೆ ಮಾತನಾಡಿ,ಪ್ರತಿಯೊಬ್ಬ ಮನುಷ್ಯನಿಗೂ ಡ್ರಗ್ಸ್ ಅವಶ್ಯಕತೆ ಇದೆ. ಡ್ರಗ್ಸ್ ಎಂದರೆ ಅದು ನಶೆ ಏರಿಸುವ ವಸ್ತು. ಹಿಂದಿನ ರಾಜ ಮಹಾರಾಜರ ಕಾಲದಿಂದ ಬಂದಿದೆ. ಡ್ರಗ್ಸ್ ನ ಬೇರೆ ಬೇರೆ ವೆರೈಟಿಗಳನ್ನು ಈಗ ಕಂಡು ಹಿಡಿದಿದ್ದಾರೆ ಎಂದರು

'ನನ್ನನ್ನೂ ಸೇರಿದಂತೆ ಎಲ್ಲ ರಾಜಕಾರಣಿಗಳಿಗೂ ವೈಯಕ್ತಿಕವಾಗಿ ಕೆಲವು ಅಭ್ಯಾಸಗಳಿರುತ್ತವೆ. ಎಲ್ಲೋ ಒಬ್ಬರು ಮಹಾತ್ಮಗಾಂಧಿ ಅಂತವರು ಇದ್ದರೆ, ಏನು ಮಾಡೋಕೆ ಆಗುತ್ತೆ. ಡ್ರಗ್ಸ್ ವಿಚಾರದಲ್ಲಿ ಈಗ ಜಾಗೃತಿ ಬಂದಿದೆ. ಈ ವಿಷಯವನ್ನು ಇಲ್ಲಿಗೆ ಬಿಟ್ಟು ಮಾಧ್ಯಮಗಳು ಬೇರೆ ವಿಷಯ ಸೃಷ್ಟಿ ಮಾಡಬೇಕು' ಎಂದರು.

ಮನುಷ್ಯ ಎಂದ ಮೇಲೆ ರಾಜಕಾರಣಿಗಳು ಸೇರಿ ಎಲ್ಲರೂ ಯಾವುದಾದರೊಂದರಲ್ಲಿ ಭಾಗಿಯಾಗಿದ್ದಾರೆ. ನಾನು ಅದರಲ್ಲಿ ಇದ್ದರೆ ನಾನೂ ಬರಬೇಕಾಗುತ್ತದೆ. ನಾನು ಅಫೀಮ್, ಸಿಗರೇಟ್ ಸೇದುವವನು ಅಲ್ಲ. ಕ್ಲಬ್ ಗೆ ಹೋಗುವವನೂ ಅಲ್ಲ, ನನ್ನ ಮೇಲೆ ಆರೋಪ ಇದ್ದರೆ ಅದು ಹೊರಗೆ ಬರಲಿ ಎಂದು ಹೇಳಿದ ಅವುರು ಹಳೆ ತೆಲೆಮಾರಿನ ರಾಜಕಾರಣಿಗಳಿಗೆ ಅವಕಾಶಗಳು ಕಡಿಮೆ ಇದ್ದವು. ಹೊಸ ತೆಲೆ ಮಾರಿನ ರಾಜಕಾರಣಿಗಳಿಗೆ ಅವಕಾಶಗಳು ಹೆಚ್ಚಾಗಿವೆ ಎಂದು ಮಾರ್ಮಿಕವಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.