ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಪತ್ತಿಗಿಂತ ವಿದ್ಯೆ ಶ್ರೇಷ್ಠ’

ಬೀಳ್ಕೊಡುಗೆ; ಪಿ.ಯು ಕಾಲೇಜ್ ಘೋಷಣೆ ಕಾರ್ಯಕ್ರಮ
Last Updated 11 ಫೆಬ್ರುವರಿ 2020, 10:33 IST
ಅಕ್ಷರ ಗಾತ್ರ

ಕೊಪ್ಪಳ: ಸಂಪತ್ತಿಗಿಂತಲೂ ವಿದ್ಯೆಯೇ ಶ್ರೇಷ್ಠವಾಗಿದ್ದು, ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಾಹಿತಿ ವಿಠ್ಠಪ್ಪ ಗೋರಂಟ್ಲಿಹೇಳಿದರು.

ಸಮೀಪದ ಭಾಗ್ಯನಗರದ ಜ್ಞಾನ ಬಂಧು ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ನೂತನವಾಗಿ ಆರಂಭಗೊಳ್ಳಲಿರುವ ಜ್ಞಾನ ಬಂಧು ಪದವಿಪೂರ್ವ ಕಾಲೇಜು ಘೋಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಪತ್ತಿಗಿಂತ ವಿದ್ಯೆಯೇ ಮೇಲು. ದಕ್ಷ, ಶಕ್ತಿಯುತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವಲ್ಲಿ ಪಾಲಕರ, ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಶಿಕ್ಷಣ ವ್ಯಕ್ತಿತ್ವ ವಿಕಾಸವನ್ನು ವಿಶಾಲ ದೃಷ್ಟಿಕೋನದಿಂದ ಉಂಟು ಮಾಡಬೇಕು ಎಂದರು.

ಗ್ರಾಮ ಸೇವಾ ವಿಶ್ವಸ್ಥ ಸಮಿತಿಯ ಅಧ್ಯಕ್ಷ ದಾನಪ್ಪ ಕವಲೂರು ಜ್ಞಾನ ಬಂಧು ವಾಣಿಜ್ಯ ಮತ್ತು ವಿಜ್ಞಾನ ಪಿಯು ಕಾಲೇಜ್‌ ಘೋಷಿಸಿಮಾತನಾಡಿ, ಈ ಭಾಗದ ಮಕ್ಕಳು ಪಿಯು ಶಿಕ್ಷಣವನ್ನು ಅರಸಿ ವಲಸೆ ಹೋಗುವುದನ್ನು ತಪ್ಪಿಸಿ, ಗುಣಮಟ್ಟದ ಶಿಕ್ಷಣದ ಅವಕಾಶವನ್ನು ನಮ್ಮ ಶಾಲಾ ಆವರಣದಲ್ಲೆ ಕಲ್ಪಿಸಬೇಕು. ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು ಎನ್ನುವ ಉದ್ದೇಶದಿಂದ ನೂತನ ಪಿ.ಯು ಕಾಲೇಜ್ ಪ್ರಾರಂಭಿಸಿದ್ದೇವೆ. ಪಿ.ಯು ಕಾಲೇಜಿಗೆ ಪ್ರವೇಶ ಪಡೆಯುವ ಶೇ 10ರಷ್ಟು ಬಡ ಅರ್ಹ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ‘ಜ್ಞಾನ ಬಂಧು ವಿದ್ಯಾಪೋಷಕ ಯೋಜನೆ’ಯನ್ನು ಪ್ರಾರಂಭಿಸಲಾಗುವುದು ಎಂದರು.

ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ನೂತನ ಕಾಲೇಜಿನ ಜಾಹೀರಾತುಮತ್ತುಬಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು. ವಕೀಲ ರಾಘವೇಂದ್ರ ಪಾನಘಂಟಿ ಅಧ್ಯಕ್ಷತೆ ವಹಿಸಿದ್ದರು.

ಭಾಗ್ಯನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಾಜಶೇಖರ ಪಾಟೀಲ್, ನಿವೃತ್ತ ಪ್ರಾಚಾರ್ಯ ಮಾಹಾಂತೇಶ ಮಲ್ಲ ನಗೌಡ್ರ, ಅಮೀನಸಾಬ್ ಸೂಡಿ, ನಿವೃತ್ತ ಉಪನ್ಯಾಸಕ ಎಸ್.ಎ.ನೂರಬಾಷಾ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸಿ.ಬಿ.ಚಿಲ್ಕರಾಗಿ, ಉದ್ಯಮಿ ವಸಂತ ಪವಾರ ಇದ್ದರು. ಪ್ರೌಢ ಶಾಲಾ ಪ್ರಾಂಶುಪಾಲ ಕೆ.ರೋಜ್‍ಮೇರಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಸಹನಾ ಹಾಗೂ ನಾಗರತ್ನ, ಪಾಲಕ ಪ್ರತಿನಿಧಿ ಮಹಾ ದೇವಪ್ಪ ಪತ್ತಾರ,ಶಿಕ್ಷಕ ವಿನಾಯಕ ರೆಡ್ಡಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಂಸ್ಥೆಯ ನಿಯೋಜಿತ ಪಿ.ಯು.ಕಾಲೇಜ್‍ನ ಪ್ರಾಚಾರ್ಯ ಶಶಾಂಕ ಹೆಗಡೆ ಪ್ರಾಸ್ತಾವಿಕವಾಗಿ ಮಾತ ನಾಡಿದರು.ಜ್ಯೋತಿ ಎಸ್.ಎಸ್. ಸ್ವಾಗತಿಸಿದರು. ಶಿಕ್ಷಕ ಶಿವರಾಜ ಏಣಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನಿಂಗಮ್ಮ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT