ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಈದ್ ಉಲ್ ಫಿತ್ರ್‌ ಆಚರಣೆ: ನೊಂದವರ ನೋವಿನಲ್ಲಿ ಭಾಗಿಯಾಗಿ

ಮೌಲಾನ್ ನೂರುಲ್ ಖಾದ್ರಿ ಸಲಹೆ
Last Updated 3 ಮೇ 2022, 13:08 IST
ಅಕ್ಷರ ಗಾತ್ರ

ಕನಕಗಿರಿ: ಮುಸ್ಲಿಂ ಬಾಂಧವರು ಮಂಗಳವಾರ ಈದ್–ಉಲ್–ಫಿತ್ರ್‌ ಆಚರಿಸಿದರು.

ಇಲ್ಲಿನ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮುಸ್ಲಿಂ ಸಮಾಜದವರು ಭಾಗವಹಿಸಿದ್ದರು.

ಜಾಮೀಯಾ ಮಸೀದಿಯ ಮೌಲಾನ್ ನೂರುಲ್ ಖಾದ್ರಿ ಮಾತನಾಡಿ,‘ಯಾರು ಕೂಡ ಜಾತಿ, ಧರ್ಮ ಎಣಿಸಬಾರದು. ಬಡವರು, ನೊಂದವರು ಹಾಗೂ ದುರ್ಬಲ ವರ್ಗದವರ ಸಂಕಷ್ಟ, ನೋವುಗಳಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು’ ತಿಳಿಸಿದರು.

ಇಬ್ರಾಯಿಂ ಮಸೀದಿಯ ಮೌಲಾನ್ ಆಫೀಜ ಮಹ್ಮದರಫಿ ರಜಾಕ್ ಮಾತನಾಡಿ,‘ಬಲಗೈಯಿಂದ ಕೊಟ್ಟ ದಾನ ಎಡಗೈಗೆ ಗೊತ್ತಾಗಬಾರದು. ಬಡವರ ಸಂಕಷ್ಟಕ್ಕೆ ಸ್ಪಂದಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ಜೀವನದಲ್ಲಿ ಅಡ್ಡದಾರಿ ಹಿಡಿಯಬಾರದು ಎಂದು ಅವರು ಸಲಹೆ ನೀಡಿದರು.

ಮೌಲಾನ್ ಎಂ. ಡಿ. ಆಸೀಂ ರಜಾಕ್, ವಿವಿಧ ಮಸೀದಿಗಳ ಅಭಿವೃದ್ಧಿ ಸಮಿತಿಗಳ ಅಧ್ಯಕ್ಷರಾದ ಮೆಹಬೂಬಸಾಬ ಗುರಿಕಾರ, ಪೀರಸಾಬ ಬೀಡಿ, ಹುಸೇನಸಾಬ ಮಂಗಲಿ, ಎಪಿಎಂಸಿ ಮಾಜಿ ನಿರ್ದೇಶಕ ಇಮಾಮಸಾಬ ಎಲಿಗಾರ, ತಾಪಂ ಮಾಜಿ ಅಧ್ಯಕ್ಷ ಹೊನ್ನೂರುಸಾಬ ಮೇಸ್ತ್ರೀ, ಪಟ್ಟಣ ಪಂಚಾಯಿತಿ ಸದಸ್ಯರಾದ ಸಂಗಪ್ಪ ಸಜ್ಜನ್, ರಾಜಸಾಬ ನಂದಾಪುರ, ನೂರುಸಾಬ ಗಡ್ಡಿಗಾಲ, ಹನುಮಂತಪ್ಪ ಬಸರಿಗಿಡದ, ಸಿದ್ದಾರ್ಥ ಕಲ್ಲಬಾಗಿಲಮಠ, ಕಂಠಿ ನಾಯಕ, ರಾಕೇಶ ಕಂಪ್ಲಿ, ಮಾಜಿ ಸದಸ್ಯರಾದ ಪಾಷ ಮುಲ್ಲಾರ, ಖಾಜಸಾಬ ಗುರಿಕಾರ, ಈದ್ಗಾ ಸಮಿತಿ ಅಧ್ಯಕ್ಷ ಬಾಬುಸಾಬ ಸೂಳೇಕಲ್, ಪ್ರಮುಖರಾದ ಡಾ. ಐ. ಎಚ್. ಕಿನ್ನಾಳ, ಶಾಮೀದಸಾಬ ಲೈನದಾರ, ಹೊನ್ನುರುಸಾಬ ನಡಲಮನಿ, ಹಟೇಲಸಾಬ ಬಸರಿಹಾಳ, ರಾಜಾಸಾಬ ವಟಪರ್ವಿ, ಯಮನೂರಸಾಬ ಬಾಗಲಿ, ಚಂದುಸಾಬ ಗುರಿಕಾರ, ಮಹ್ಮದಸಾಬ ಕಾತರಕಿ, ಗೌಸುಸಾಬ ಗುರಿಕಾರ, ಡಾ. ಮೌಲಹುಸೇನ ಸಿಕ್ಲಗಾರ, ಶಿರಿವಾರ, ಬಸರಿಹಾಳ, ಚಿಕ್ಕಖೇಡ, ನಿರ್ಲೂಟಿ, ಮುಸಲಾಪುರ, ಬಂಕಾಪುರ, ಉಪಲಾಪುರ, ಸೋಮಸಾಗರ ಸೇರಿ ಗ್ರಾಮಸ್ಥರು ಭಾಗವಹಿಸಿದ್ದರು.

ಸಾಮೂಹಿಕ ಪ್ರಾರ್ಥನೆ ಮುಗಿದ ನಂತರ ಪರಸ್ಪರರು ಆಲಿಂಗನ ಮಾಡಿಕೊಳ್ಳುತ್ತಿರುವುದು ಹಾಗೂ ಹಸ್ತಲಾಘವ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT