ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹುತಿಗೆ ಕಾದಿರುವ ವಿದ್ಯುತ್ ಕಂಬ, ತಂತಿಗಳು

Last Updated 9 ಜುಲೈ 2018, 17:20 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಅರಳಿಹಳ್ಳಿ ಗ್ರಾಮದ ಬಳಿಯ ಲಿಂಗಸುಗೂರು- ಕುಡತಿನಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ವಿದ್ಯುತ್ ಕಂಬವೊಂದು ವಾಲಿದ್ದು, ತಂತಿಗಳು ರಸ್ತೆಯ ಮೇಲೆ ಯಾವುದೇ ಸಂದರ್ಭದಲ್ಲಿಯೂ ತುಂಡಾಗಿ ಬೀಳಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಹೇರೂರು ಗ್ರಾಮದಿಂದ ಗಂಗಾವತಿ ಮಾರ್ಗವಾಗಿ ಹೋಗುವ ರಸ್ತೆಯಲ್ಲಿ ಅರಳಿಹಳ್ಳಿಯ ರಾಜರಾಜೇಶ್ವರಿ ಬೃಹನ್ಮಠದ ಸಮೀಪದಲ್ಲಿ ಈ ಸಮಸ್ಯೆ ಇದ್ದು, ಕೂಡಲೆ ಜೆಸ್ಕಾಂ ಅಧಿಕಾರಿಗಳು ವಾಲಿದ ಕಂಬ ಹಾಗೂ ಜೋತು ಬಿದ್ದ ತಂತಿಯನ್ನು ತೆಗೆಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಗ್ರಾಮದ ಸಣ್ಣಪ್ಪ ಅರಳಿ, ಬಸವರಾಜ ಬೇವಿನಮಠ, ‘ಮಳೆ, ವಿಪರೀತ ಗಾಳಿ ಬೀಸುತ್ತಿದ್ದು, ಕಂಬ ದಿನದಿಂದ ದಿನಕ್ಕೆ ವಾಲುತ್ತಿದೆ. ದುರಸ್ತಿಗೀಡಾದಂತೆ ಕಾಣುವ ಈ ವಿದ್ಯುತ್ ಕಂಬ ಹಾಗೂ ತಂತಿಯಲ್ಲಿ ವಿದ್ಯುತ್ ಪ್ರವಾಹಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ಅಪಾಯ ಎದುರಾಗಲಿದೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದ್ದಾರೆ.

’ಪ್ರವಾಸಿ ತಾಣವಾದ ಕನಕಗಿರಿ ಸೇರಿದಂತೆ ಕಲಬುರ್ಗಿಗೆ ಇದೇ ರಸ್ತೆಯ ಮೂಲಕ ಹೋಗಬೇಕು. ನಿತ್ಯ ನೂರಾರು ವಾಹನಗಳು ಈ ರಸ್ತೆಯ ಮಾರ್ಗವಾಗಿ ಸಂಚರಿಸುತ್ತವೆ. ಯಾವುದೇ ಸಂದರ್ಭದಲ್ಲಿಯೂ ತಂತಿ ತುಂಡಾಗಿ ವಾಹನಗಳ ಮೇಲೆ ಬಿದ್ದು ಅಪಾಯ ಎದುರಾಗಬಹುದು’ ಎಂದು ಸ್ಥಳೀಯರಾದ ಗುರುರಾಜ್ ಆತಂಕ ವ್ಯಕ್ತಪಡಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT