ಗಂಗಾವತಿ: ತಾಲ್ಲೂಕಿನ ಹನುಮನಹಳ್ಳಿಯ 100 ಕುಟುಂಬಗಳಿಗೆ ಇಂಗ್ಲೆಂಡ್ ಸಹೋದರರಿಬ್ಬರು ಆಹಾರ ಧಾನ್ಯದ ಕಿಟ್ಗಳನ್ನು ನೀಡಿದ್ದಾರೆ.

ಪ್ರತಿವರ್ಷ ಭಾರತಕ್ಕೆ ಪ್ರವಾಸ ಬರುವ ಇಂಗ್ಲೆಂಡ್ನ ರೋಸ್ ಹಾಗೂ ಲೀಯಂ ಸಹೋದರರು ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಭಾರತಕ್ಕೆ ಬಂದಿಲ್ಲ.

ಭಾರತಕ್ಕೆ ಭೇಟಿ ನೀಡಿದ ವೇಳೆ ಅವರು ಹಂಪಿಗೆ ಆಗಮಿಸುತ್ತಿದ್ದರು. ಸಮೀಪದ ವಿರುಪಾಪೂರ ಗಡ್ಡೆಯಲ್ಲಿನ ರೆಸಾರ್ಟ್ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಆಗ ಹಂಪಿಯ ಗೈಡ್ ವಿರುಪಾಕ್ಷ ನಾಯಕ ಅವರ ಪರಿಚಯವಾಗಿತ್ತು. ಆ ಒಡನಾಟ ಇನ್ನೂ ಮುಂದುವರಿದಿದೆ.

ವಿರುಪಾಕ್ಷ ನಾಯಕ ಅವರ ಮೂಲಕ ದೂರವಾಣಿಯಲ್ಲಿ ಇಲ್ಲಿನ ಪರಿಸ್ಥಿತಿಯ ಕುರಿತು ತಿಳಿದುಕೊಂಡಿರುವ ಅವರು, ಬಡ ಕುಟುಂಬಗಳಿಗೆ ಆಸರೆ ಆಗಿದ್ದಾರೆ.

ಕೋವಿಡ್ ಲಾಕ್ಡೌನ್ ಕಾರಣ ಕೆಲಸ ಇಲ್ಲದಿರುವುದರಿಂದ ಹನುಮನಹಳ್ಳಿ, ಮೆಹಬೂಬನಗರದ ಬಡ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಅವರಿಗೆ ನೆರವು ನೀಡುವ ಉದ್ದೇಶದಿಂದ ಇಂಗ್ಲೆಂಡ್ ಸಹೋದರರಿಬ್ಬರು ಹಂಪಿ ಗೈಡ್ ವಿರುಪಾಕ್ಷ ನಾಯಕ ಅವರಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಅದರಂತೆ ಸದ್ಯ 100 ಕುಟುಂಬಗಳಿಗೆ ಅಕ್ಕಿ, ಬೇಳೆ, ಮಾಸ್ಕ್, ಸ್ಯಾನಿಟೈಸರ್ ಇರುವ ಕಿಟ್ಗಳನ್ನು ವಿತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.