ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಿ’

Last Updated 6 ಜೂನ್ 2020, 11:21 IST
ಅಕ್ಷರ ಗಾತ್ರ

ಕುಕನೂರು: ‘ಮುಂದಿನ ಪೀಳಿಗೆ ಆರೋಗ್ಯವಂತರಾಗಿ ಬಾಳಬೇಕಾದರೆ ಪರಿಸರ ಸಂರಕ್ಷಣೆ ಅಗತ್ಯವಿದೆ‘ ಎಂದು ಮುಖ್ಯಾಧಿಕಾರಿ ಶ್ರೀಶೈಲಗೌಡ ಸಂಕನಗೌಡ್ರ ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮಗೆ ಶೇ 33 ರಷ್ಟು ಅರಣ್ಯ ಇರಬೇಕು. ಆದರೆ ಶೇ 21 ರಷ್ಟು ಅರಣ್ಯ ಇದೆ. ಆದ್ದರಿಂದಲೇ ಬರಗಾಲ, ಪ್ರವಾಹ, ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ಮರಗಳನ್ನು ಪೋಷಿಸುವುದು ಎಲ್ಲರ ಜೀವನದ ಭಾಗವಾಗಬೇಕು. ಪರಿಸರವನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಭವಿಷ್ಯದಲ್ಲಿ ಎದುರಾಗುವ ಅನೇಕ ಅಪಾಯಗಳನ್ನು ತಪ್ಪಿಸಬಹುದು’ ಎಂದು ತಿಳಿಸಿದರು.

ಹಿರಿಯ ಆರೋಗ್ಯಧಿಕಾರಿ ಚನ್ನಬಸಯ್ಯ ಸಗಣಚಾರ ಮಾತನಾಡಿ, ಪರಂಪರಾಗತವಾಗಿ ಬಂದ ಸಂಪತ್ತಾದ ಪರಿಸರವನ್ನು ಉಳಿಸಿ ಮುಂದಿನ ತಲೆಮಾರಿ ಉಡುಗೊರೆಯಾಗಿ ಕೊಡಬೇಕು. ಯುವಕರು ಪ್ರತಿಯೊಬ್ಬರೂ ಗಿಡ ನೆಡುವ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಮನೆಗೊಂದು ಮರ, ಊರಿಗೊಂದು ವನದಂತೆ ಮರಗಿಡಗಳನ್ನು ಬೆಳೆಸಬೇಕು. ಕೇವಲ ಜೂನ್ 5 ರಂದು ಮಾತ್ರ ಪರಿಸರ ದಿನ ಆಚರಿಸಿದರೆ ಸಾಲದು. ಅದು ನಿತ್ಯವೂ ಪಾಲನೆಯಾಗುತ್ತಿರಬೇಕು’ ಎಂದರು.

ರಹೀಮನ್ ಸಾಬ್ ಮಕ್ಕಪ್ಪನವರ, ಬಸವರಾಜ ಅಡವಿ, ಸಿರಾಜ ಕರುಮುಡಿ, ಮಹೇಶ ಕವಲೂರು, ಶಿದ್ದು ಉಳ್ಳಾಗಡ್ಡಿ, ರಾಮಣ್ಣ ಬಂಕದಮನಿ, ಮಹೇಶ ಜಂಗ್ಲಿ, ಶಂಕರಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT