ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರೂ ಜವಾಬ್ದಾರಿ ನಿರ್ವಹಿಸಿ: ತಹಶೀಲ್ದಾರ

Last Updated 27 ಜನವರಿ 2020, 11:16 IST
ಅಕ್ಷರ ಗಾತ್ರ

ಕಾರಟಗಿ: ನಮ್ಮ ಜವಾಬ್ದಾರಿತನವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಸಂವಿಧಾನದ ಆಶಯ ಕಾಪಾಡುವ ಜೊತೆಗೆ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ತಹಶೀಲ್ದಾರ ಆರ್‌. ಕವಿತಾ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೋಧಿಸಿ ಮಾತನಾಡಿ, ಯಾವುದೇ ಆಸೆ, ಆಮಿಷಕ್ಕೆ ಬಲಯಾಗದೇ ನಿರ್ಭಯವಾಗಿ ಮತದಾನ ಮಾಡುವುದರೊಂದಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದರು.

ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಪ್ರಾಚಾರ್ಯ ಅನೀಲಕುಮಾರ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಶ್ರೀಕಾಂತ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ

ಅಧ್ಯಕ್ಷ ಅಮರೇಶ ಮೈಲಾಪುರ, ಸಿರಸ್ತೇದಾರ ಮಲ್ಲಿಕಾರ್ಜುನ, ಉಪ ತಹಶೀಲ್ದಾರ ಬಾಲಚಂದ್ರ, ಕಂದಾಯ ನಿರೀಕ್ಷಕ ಎಚ್‌. ಸುರೇಶ, ಗ್ರಾಮ ಲೆಕ್ಕಿಗರಾದ

ಉಮೇಶ, ದೊಡ್ಡನಗೌಡ, ರಘು ನಾಯಕ, ಮಂಜುನಾಥ ರಾಠೋಡ, ಗಂಗಪ್ಪ ಸಿಬ್ಬಂದಿ ಗಿರಿಸ್ವಾಮಿ, ಈಶ್ವರ, ವಿವಿಧೆಡೆಯ ಬೂಥ್ ಮಟ್ಟದ ಅಧಿಕಾರಿಗಳು,

ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT