ಕಾರಟಗಿ: ತುಂಗಭದ್ರಾ ಜಲಾಶಯದ ನೀರನ್ನು ರೈತರ ಬೆಳೆಯ ರಕ್ಷಣೆಗೆ ಮೀಸಲಿಡಬೇಕು. ಭತ್ತದ ಬೆಳೆ ರೈತರ ಕೈಸೇರಲು ಕನಿಷ್ಟ ಏ.20ರವರೆಗೆ ನೀರು ಬಿಡಬೇಕು ಎಂದು ಆಗ್ರಹಿಸಿ ರೈತರು ಮಾ.19ರಂದು ಪಟ್ಟಣದಲ್ಲಿ ಮೌನ ಮೆರವಣಿಗೆಯ ಮೂಲಕ ಪ್ರತಿಭಟನೆ ಮಾಡಲಾಗುವುದು ಎಂದು ಬೂದಗುಂಪಾ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಸಂಗಮೇಶಗೌಡ ತಿಳಿಸಿದರು.

ತಾಲ್ಲೂಕಿನ ಬೂದಗುಂಪಾದಲ್ಲಿ ವಿವಿಧ ಗ್ರಾಮಗಳ ರೈತರ ಸಭೆಯ ಬಳಿಕ ಮಾತನಾಡಿ, ಅಂದು ಕಾರಟಗಿಯ ನೀರಾವರಿ ಇಲಾಖೆ ಕಚೇರಿಯಿಂದ ರೈತರು ನವಲಿ ವೃತ್ತದವರೆಗೆ ತೆರಳಿ ನೀರು ಬಿಡುವಂತೆ ಘೋಷಣೆ ಹಾಕಲಿದ್ದೇವೆ. ಬಳಿಕ ತಹಶೀಲ್ದಾರ್, ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಏ.20ರವರೆಗೆ ಎಡದಂಡೆ ಮುಖ್ಯಕಾಲುವೆಗೆ 3800 ಕ್ಯುಸೆಕ್ ನೀರನ್ನು ನಿರಂತರವಾಗಿ ಹರಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.