ಗಂಗಾವತಿ: ‘ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳಲ್ಲಿ 2025-26ನೇ ಸಾಲಿನ ಕರ ವಸೂಲಾತಿ ಆಂದೋಲನ ಆರಂಭಿಸಿದ್ದು, ಡಿ 17ರಂದು ನಡೆದ ಒಂದೇ ದಿನದ ಕರ ವಸೂಲಾತಿಯಲ್ಲಿ ಎಲ್ಲ ಗ್ರಾ.ಪಂಗಳಿಂದ ಒಟ್ಟು ₹33,71,856 ಹಣ ಸಂಗ್ರಹವಾಗಿದೆ’ ಎಂದು ತಾ.ಪಂ ಇಓ ರಾಮರೆಡ್ಡಿ ಪಾಟೀಲ ತಿಳಿಸಿದ್ದಾರೆ.

ತಾಲ್ಲೂಕಿನ ಗ್ರಾಮೀಣ ಭಾಗದ ಸಾರ್ವಜನಿಕ ಮಳಿಗೆ, ರೈಸ್ ಮಿಲ್, ನಿವೇಶನ, ನೀರಿನ ತೆರಿಗೆ, ಪೆಟ್ರೋಲ್ ಬಂಕ್, ಖಾಸಗಿ ಶಾಲೆ-ಕಾಲೇಜು, ವಾಣಿಜ್ಯ ಆಸ್ತಿಗಳ ತೆರಿಗೆ ಪಾವತಿ ಸೇರಿ ಸಣ್ಣ-ದೊಡ್ಡ ವ್ಯಾಪಾರಿಗಳು ಪರವಾನಗಿ ನವೀಕರಿಸಿ ಕೊಳ್ಳುವ ಬಗ್ಗೆ ಮನೆ–ಮನೆಗೆ ಭೇಟಿ ನೀಡಿ ಕರ ವಸೂಲಾತಿ ಆಂದೋಲನ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗಿತ್ತು.

ಗ್ರಾ.ಪಂ ಕರವಸೂಲಿಗಾರರು, ಸಿಬ್ಬಂದಿ ಅಭಿಯಾನದಲ್ಲಿ ಭಾಗವಹಿಸಿ, ಅಪಾರ ತೆರಿಗೆ ಸಂಗ್ರಹಿಸಿದ್ದಾರೆ. ತಾಲ್ಲೂಕಿನ ಮಲ್ಲಾಪುರ ಗ್ರಾ.ಪಂ ₹90 ಸಾವಿರ, ಡಣಾಪುರ ಗ್ರಾ.ಪಂ ₹52,376, ಸಣಾಪುರ ₹22,745, ಆನೆಗೊಂದಿ ₹1.53 ಲಕ್ಷ ಸಂಗಾಪುರ ₹21,859, ಮರಳಿ ₹1.04ಲಕ್ಷ, ಜಂಗಮರ ಕಲ್ಗುಡಿ ₹2ಲಕ್ಷ, ಆಗೋಲಿ ₹20,266, ಹೊಸಕೆರಾ ₹36, 663, ಕೇಸರಹಟ್ಟಿ ₹1.22ಲಕ್ಷ, ಚಿಕ್ಕಬೆಣಕಲ್ ₹63,636, ಹೇರೂರು ₹48,864, ವೆಂಕಟಗಿರಿ ₹4.12ಲಕ್ಷ, ಬಸಾಪಟ್ಟಣ ಗ್ರಾ.ಪಂ ₹1.12ಲಕ್ಷ ಸಂಗ್ರಹ ಮಾಡಿದೆ.

ಜೊತೆಗೆ ಚಿಕ್ಕಜಂತಕಲ್ ಗ್ರಾ.ಪಂ ₹68,487, ಶ್ರೀರಾಮನಗರ ₹3.21ಲಕ್ಷ, ವಡ್ಡರಹಟ್ಟಿ ಗ್ರಾ.ಪಂ ₹14,64 ಲಕ್ಷ ಸೇರಿ 18 ಗ್ರಾಪಂಗಳಿಂದ ₹33,71,856 ಹಣ ಕರ ವಸೂಲಿ ಸಂಗ್ರಹವಾಗಿದೆ. ಸಂಗ್ರಹವಾಗಿರುವ ಕರದಲ್ಲಿ ಗ್ರಾ.ಪಂ ಸಿಬ್ಬಂದಿ ವೇತನದ ಜೊತೆಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.