ಕೊಪ್ಪಳ: ಸೂರ್ಯಾಸ್ತವಾಗುತ್ತಿದ್ದಂತೆ ಇಲ್ಲಿನ ಗವಿಮಠದ ಕೈಲಾಸ ಮಂಟಪದಲ್ಲಿ ಮಂಗಳವಾರ ನಡೆದ ಸಂಗೀತದ ಜುಗಲ್ಬಂದಿ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿತು.

ಬೆಟ್ಟದ ಮೇಲೆ ಕುಳಿತಿದ್ದ ಸಾವಿರಾರು ಜನರಿಗೆ ಸಂಗೀತ ಸಂಭ್ರಮದಲ್ಲಿ ಮಿಂದೇಳುವ ಅವಕಾಶವೂ ಲಭಿಸಿತು. ಬೆಂಗಳೂರಿನ ವಿದ್ವಾನ್ ಅಂಬಿ ಸುಬ್ರಹ್ಮಣ್ಯಂ ಅವರಿಂದ ಪಿಟೀಲು, ಸಿದ್ದಾರ್ಥ್ ಬೆಳ್ಮಣ್ಣು ಅವರಿಂದ ಗಾಯನ, ವಿದ್ವಾನ್ ಗಿರಿಧರ ಉಡುಪ ಇವರಿಂದ ಘಟಮ್, ಮುಂಬೈನ ಓಜಸ್ ಅಧಿಯಾ ತಬಲಾ ಸಾಥ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮ ಗಮನ ಸೆಳೆಯಿತು. ಬೆಂಗಳೂರಿನ ಪ್ರಲ್ಹಾದ ಆಚಾರ್ಯ ಹಾಗೂ ಕಲಾವಿದರಿಂದ ಮಾತನಾಡುವ ಗೊಂಬೆ ಕಲಾ ಪ್ರದರ್ಶನ ಜರುಗಿತು.

ಭಕ್ತರ ದಂಡು: ಮಹಾರಥೋತ್ಸವ ನಡೆದ ಮರುದಿನವಾದ ಮಂಗಳವಾರವೂ ಲಕ್ಷಾಂತರ ಭಕ್ತರು ಗವಿಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ರಥೋತ್ಸವಕ್ಕೆ ಪೂಜೆ ಸಲ್ಲಿಸಿ ನಮಸ್ಕರಿಸಿ ವಿವಿಧ ದೇಶಿ ಕ್ರೀಡೆಗಳನ್ನು ಕಣ್ತುಂಬಿಕೊಂಡರು. ಮಕ್ಕಳ ಆಟಿಕೆ ಸಾಮಗ್ರಿಗಳ ವಿಭಾಗ, ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಯ ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು.

ಮಂಗಳವಾರ ಬೆಳಗಿನ ಜಾವದಿಂದಲೇ ಮಠಕ್ಕ ಭಕ್ತರು ಬರುವ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿತ್ತು. ಸಂಜೆಯಾಗುತ್ತಿದ್ದಂತೆ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಲೇ ಇತ್ತು. ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ ವಾಹನಗಳನ್ನು ಅಲ್ಲಲ್ಲಿ ತಡೆದಿದ್ದರಿಂದ ಸುಗಮ ಸಂಚಾರ ಸಾಧ್ಯವಾಯಿತು.

ಜಿಜ್ಞಾಸುಗಳ ಪಯಣ: ಯಾತ್ರಿ ನಿವಾಸದ ಆವರಣದಲ್ಲಿರುವ ಶಾಂತವನದಲ್ಲಿ ಕಜ್ಜಿಡೋಣಿಯ ಕೃಷ್ಣಾನಂದ ಶಾಸ್ತ್ರಿಗಳು ಹಾಗೂ ಬೆನಕನಹಳ್ಳಿ ದೇವಾನಂದ ಶರಣರು ಅನ್ವೇಷಣೆ (ಜಿಜ್ಞಾಸುಗಳ ಪಯಣ) ಎಂಬ ಆಧ್ಯಾತ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು.

ವೇದಿಕೆಯ ಮೇಲೆ ಬಾಗಲಕೋಟೆ ಜಿಲ್ಲಾ ಕಜ್ಜಿಡೋಣಿಯ ಕೃಷ್ಣಾನಂದ ಶಾಸ್ತ್ರಿಗಳು, ಸುರಪುರ ಬೆನಕನಹಳ್ಳಿ ದೇವಾನಂದ ಸ್ವಾಮೀಜಿ, ಅಜ್ಜಂಪುರದ ಚಿದಾನಂದಗಿರಿ, ರಾಯಚೂರು ಜಿಲ್ಲೆಯ ನೀರಮಾನ್ವಿಯ ಹನುಮಂತರಾಯಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ನಾಟಕ ಪ್ರದರ್ಶನ: ತಾಲ್ಲೂಕಿನ ಹಿರೇಬಗನಾಳ ಗ್ರಾಮದ ಗವಿಸಿದ್ದೇಶ್ವರ ಸೇವಾ ನಾಟ್ಯ ಸಂಘದ ವತಿಯಿಂದ ಮಠದ ಆವರಣದಲ್ಲಿ ಗವಿಸಿದ್ದೇಶ್ವರ ಮಹಾತ್ಮೆ ನಾಟಕ ಪ್ರದರ್ಶನಗೊಂಡಿತು.

ನಾಟಕ ಉದ್ಘಾಟಿಸಿ ಮಾತನಾಡಿದ ಭೂಕೈಲಾಸ ಮೇಲುಗದ್ದುಗೆ ಹಿರೇಮಠದ ಗುರುಶಾಂತವೀರ ಸ್ವಾಮೀಜಿ ‘ಗವಿಸಿದ್ಧೇಶನನ್ನು ನೋಡುವದಕ್ಕೆ ಸಾಧ್ಯವಾಗಿಲ್ಲ. ಈ ನಾಟಕದ ಮೂಲಕ ಅವರ ಪವಾಡ ಮತ್ತು ಲೀಲೆಗಳನ್ನು ಅರ್ಥೈಸಿಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ’ ಎಂದರು.

ದೀರ್ಘದಂಡ ನಮಸ್ಕಾರ

ಶಿವಶಾಂತವೀರ ಶರಣರಿಂದ ದೀರ್ಘದಂಡ ನಮಸ್ಕಾರ ಕಾರ್ಯಕ್ರಮ ಮಂಗಳವಾರ ನಡೆಯಿತು. ಇದು ಗವಿಮಠದ ಪರಂಪರಾಗತ ಸಂಪ್ರದಾಯ. ಬಳಗಾನೂರಿನ ಶಿವಶಾಂತವೀರ ಶರಣರು ಮಠದ ಮಹಾದ್ವಾರದಿಂದ ಪ್ರಾರಂಭಿಸಿ ಗವಿಮಠದ ಬೆಟ್ಟದ ಮೇಲಿನ ಮರಿಶಾಂತವೀರ ಶಿವಯೋಗಿಗಳ ಗದ್ದುಗೆ ತನಕ ಹೂವಿನ ಹಾಸಿಗೆಯ ಮೇಲೆ ಭಕ್ತಿಯ ಭಾವಾವೇಷವಾಗಿ ದೀರ್ಘದಂಡ ನಮಸ್ಕಾರ ಹಾಕಿದರು. ಆಗ ಶರಣರ ಹಿಂದೆ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಂಡ ಅಪಾರ ಭಕ್ತ ಸಮೂಹ ದೀರ್ಘದಂಡ ನಮಸ್ಕಾರ ಹಾಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.