ಕೊಪ್ಪಳ: ಜಾತ್ರೋತ್ಸವದ ದಾಸೋಹ ಮಂಟಪದಲ್ಲಿ ಜಾತ್ರೆಯ ಮೂರನೇ ದಿನವಾದ ಬುಧವಾರ ಹಪ್ಪಳದ ಸಪ್ಪಳ ಕೇಳಿಬರಲಿದೆ.

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ-ದಾಸಾಪೂರ ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ಹಪ್ಪಳ ಉಣಬಡಿಸಲು ತಯಾರಿ ಮಾಡಿಕೊಂಡಿದ್ದಾರೆ. ಗವಿಶ್ರೀ ಗೆಳೆಯರ ಸೇವಾ ಬಳಗ-ಉದಯ ಗ್ರೂಪ್ ಎಂಬ ಹೆಸರಿನ ಸುಮಾರು 70ರಿಂದ 80 ಭಕ್ತರ ತಂಡ ಹಪ್ಪಳ ತಯಾರಿಸಲಿದೆ.

ಉದಯ ಗ್ರೂಪ್ ತಂಡ ಐದು ಕ್ವಿಂಟಲ್ ತಯಾರಾದ ಹಪ್ಪಳ ಖರೀದಿಸಿದ್ದು, ಇದರ ಜೊತೆಗೆ ಸುಮಾರು 10ರಿಂದ 15 ಡಬ್ಬಿ ಅಡುಗೆ ಎಣ್ಣೆ ಬಳಕೆ ಮಾಡಿ ಹಪ್ಪಳ ಮಾಡಲಿದ್ದಾರೆ. ಸುಮಾರು 5 ಕಡಾಯಿ ಇರಿಸಿ ಹಪ್ಪಳ ಕರಿಯಲು ತಯಾರಿ ಮಾಡಿಕೊಳ್ಳಲಾಗಿದೆ. ಕನಿಷ್ಠ 2 ಲಕ್ಷಕ್ಕೂ ಹೆಚ್ಚು ಹಪ್ಪಳ ತಯಾರಿ ಆಗಲಿವೆ ಎಂದು ಹಪ್ಪಳ ತಂಡದ ಸದಸ್ಯ ಡಿ. ಸಿದ್ದರಾಮಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.