ಅಳವಂಡಿ: ಗುರು ಎಂದರೆ ಬೆಳಕು, ಜ್ಞಾನ, ತೇಜಸ್ಸು. ಅದಕ್ಕೆ ಗುರುಗಳನ್ನು ಜ್ಞಾನಸೂರ್ಯ ಎನ್ನುತ್ತಾರೆ. ಸೂರ್ಯ ಬಂದ ಕೂಡಲೆ ಕತ್ತಲೆ ಸಹಜವಾಗಿ ಕರಗುವಂತೆ ಗುರುವಿನ ಜ್ಞಾನದ ಅನುಗ್ರಹ ಆದ ಕೂಡಲೇ ಅಜ್ಞಾನ ತಾನಾಗಿಯೇ ನಿವಾರಣೆಯಾಗಿ ಸುಜ್ಞಾನ ಫಲಿಸುತ್ತದೆ. ಗುರುಗಳು ಜ್ಞಾನದ ಸಂಜೀವಿನಿ ನೀಡುವ ಶಕ್ತಿಯಾಗಿದ್ದಾರೆ ಎಂದು ಸಿದ್ಧೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.
ಗ್ರಾಮದ ಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ 1994-95ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಗುರುವಂದನ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಭಾನುವಾರ ಮಾತನಾಡಿದರು.
ಎಲ್ಲರನ್ನು ಸಮ ದ್ಥಷ್ಟಿಯಿಂದ ನೋಡುತ್ತಾ ಜ್ಞಾನದ ಧಾರೆಯನ್ನು ಹರಿಸುವ ಗುರುಗಳನ್ನು ಗೌರವಿಸುವದು ನಿಜಕ್ಕೂ ಒಂದು ಸತ್ಕಾರ್ಯವೇ ಸರಿ ಹಾಗೂ ಅವರನ್ನು ಆಧರಿಸುವ ಬವ್ಯ ಪರಂಪರೆ ನಮ್ಮದು. ಇದು ಶಿಷ್ಯರ ಗುರುಗಳ ಅಪೂರ್ವ ಸಂಗಮ ಇಲ್ಲಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಭವ್ಯ ಕಾರ್ಯಕ್ರಮ ಇದಾಗಿದೆ ಎಂದರು.
ನಿವೃತ್ತ ಪ್ರಾಚಾರ್ಯ ಎ.ಟಿ.ಕಲ್ಮಠ ಮಾತನಾಡಿದರು.
ಇದಕ್ಕೂ ಮೊದಲು ಗುರುಗಳನ್ನು ಪುಷ್ಪ ಸಮರ್ಪಣೆ ಮೂಲಕ ಸ್ವಾಗತಿಸಿದರು. ನಂತರ ಗುರುಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಬುಜಂಗಸ್ವಾಮಿ ಇನಾಮದಾರ, ಪ್ರಕಾಶ ತಗಡಿನಮನಿ, ಚಂದ್ರಶೇಖರ ದೊಡ್ಡಮನಿ, ಪುಲೇಶಿ, ಲಕ್ಕನಗೌಡರ, ಎಂ.ಎಸ್. ಹೊಟ್ಟಿನ, ಬಿ.ಎಸ್. ತೊಂಡಿಹಾಳ, ಎಂ.ಎಲ್. ಪೋಲಿಸಪಾಟೀಲ, ಪಿ.ವಿ. ಹಿರೇಮಠ, ಜಿ.ಜಿ. ಕುರಡಗಿ, ಎಚ್.ಎಸ್. ಎಲ್ಲಪ್ಪಗೌಡರ, ಪಿ.ಎಚ್. ಹಿರೇಮಠ, ಎಚ್.ಎಸ್. ಕಲ್ಗುಡಿ, ವಿ.ಎಚ್. ಕಲಾದಗಿ, ಹಿರೇಮನಿ, ವರಲಕ್ಷ್ಮಿ, ಅನ್ನಪೂರ್ಣ, ಶಂಕ್ರಮ್ಮ, ಮಾಯಾದೇವಿ, ಸುರೇಶ, ಮಹೇಶ, ಶರಣಪ್ಪ, ನಾಗಪ್ಪ ಮಾಸ್ತರ, ವಿಷ್ಣು, ವೀರಣ್ಣ, ಜಾನಮ್ಮ, ವಿಠ್ಠಲ, ಲೀಲಾವತಿ ಹಾಗೂ ಶಿಕ್ಷಕರು, 1994-95ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.