ರಾಷ್ಟ್ರೀಯ ಹೋಳಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಜನ
ಹೋಳಿ ಉತ್ಸವದ ಅಂಗವಾಗಿ ಸಾಂಪ್ರದಾಯಿಕ ಧಿರಿಸು ತೊಟ್ಟು ಕಂಗೊಳಿಸಿದ ಬಂಜಾರ ಸಮುದಾಯದ ಮಹಿಳೆಯರು
ವಿವಿಧ ಧಾರ್ಮಿಕ ಮುಖಂಡರು ಅಗ್ನಿಗೆ ಪೂಜೆ ಮಾಡುವ ಮೂಲಕ ರಾಷ್ಟ್ರೀಯ ಹೋಳಿ ಉತ್ಸವಕ್ಕೆ ಚಾಲನೆ ನೀಡಿದರು

ಲಂಬಾಣಿ ಸಮುದಾಯಕ್ಕೆ ಬಹದ್ದೂರ್ ಬಂಡಿ ಪವಿತ್ರ ಕ್ಷೇತ್ರ. ಸಮುದಾಯ ರಾಜಕೀಯವಾಗಿಯೂ ಅವಕಾಶ ಪಡೆದು ಮುಂದೆ ಬರಬೇಕು.
ಸಿ.ವಿ. ಚಂದ್ರಶೇಖರ್ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ
ಬಣ್ಣಬಣ್ಣಗಳು ಕೂಡಿದಾಗ ಹೇಗೆ ಅಂದವಾಗಿ ಕಾಣುತ್ತವೆಯೊ ಅದೇ ರೀತಿ ಮನಸ್ಸು ಮನಸ್ಸುಗಳು ಕೂಡಿದಾಗ ಬದುಕು ಚೆನ್ನಾಗಿ ಇರುತ್ತದೆ. ಹೋಳಿ ಕೇವಲ ಹಬ್ಬವಲ್ಲ ಬದುಕಿನ ಸಂಭ್ರಮ.
ಡಾ. ಬಸವರಾಜ ಕ್ಯಾವಟರ್ , ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯಬದುಕಿ ಬದುಕಲು ಬಿಡಿ ಸಿದ್ದಾಂತ: ಜಾಧವ್
ಮಾಜಿ ಸಂಸದ ಡಾ. ಉಮೇಶ ಜಾಧವ್ ಮಾತನಾಡಿ ಮೀಸಲಾತಿ ವಿಚಾರದಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದ್ದು ಸರಿಪಡಿಸಬೇಕಾಗಿದೆ. ಎಲ್ಲವನ್ನೂ ಕಸಿದುಕೊಳ್ಳಬೇಕು ಎನ್ನುವ ಮನೋಭಾವನೆ ನಮಗಿಲ್ಲ ನೀವು ಬದುಕಿ ಹಾಗೂ ನಮಗೂ ಬದುಕಲು ಬಿಡಿ ಎನ್ನುವ ಸಿದ್ದಾಂತ ಹೊಂದಿದ್ದೇವೆ ಎಂದರು. ಬಂಜಾರ ಸಮುದಾಯಕ್ಕೆ ಬಹದ್ದೂರ್ ಬಂಡಿ ಪವಿತ್ರವಾಗಿದೆ. ಕ್ಷೇತ್ರದಲ್ಲಿರುವ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಹೋಗಿ ಅಭಿವೃದ್ಧಿಗೆ ಅನುದಾನ ಪಡೆದುಕೊಳ್ಳೋಣ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.