ಗುರುವಾರ , ಜೂನ್ 24, 2021
29 °C
ಜಿಲ್ಲೆಯ ವಿವಿಧೆಡೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಸರಳ ಆಚರಣೆ: ಭಾವಚಿತ್ರಕ್ಕೆ ಪೂಜೆ, ಪುಷ್ಪನಮನ

‘ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸದಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ:  ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಹೇಮರಡ್ಡಿ ಮಲ್ಲಮ್ಮ ಅವರ  ಭಾವಚಿತ್ರಕ್ಕೆ ಸೋಮವಾರ ಪುಷ್ಪ ನಮನ ಸಲ್ಲಿಸಲಾಯಿತು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಸರಳವಾಗಿ ಆಚರಿಸಲಾಯಿತು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಮುಂತಾದವರು ಇದ್ದರು.

‘ಮಹಿಳೆಯರಿಗೆ ಸ್ಫೂರ್ತಿ’

ಕನಕಗಿರಿ: ಪಟ್ಟಣ ಸೇರಿ ವಿವಿಧ ಗ್ರಾಮಗಳಲ್ಲಿ ಸೋಮವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ರವೀಂದ್ರ ಸಜ್ಜನ್ ಮಾತನಾಡಿ,‘ಹೇಮರಡ್ಡಿ ಮಲ್ಲಮ್ಮನವರು ಶೋಷಣೆಗೆ ಒಳಗಾಗಿದ್ದರು. ತಾಳ್ಮೆ ಹಾಗೂ ಭಕ್ತಿಯಿಂದ ಇಡೀ ಕುಟುಂಬ ನಡೆಸಿ ಮಹಿಳೆಯರ ಕಣ್ಮಣಿಯಾಗಿದ್ದರು’ ಎಂದರು.

ಸದಸ್ಯರಾದ ಮಂಜುನಾಥರೆಡ್ಡಿ ಮಾದಿನಾಳ, ಹುಲಗಪ್ಪ ವಾಲೇಕಾರ, ಸುಭಾಸ ಕಂದಕೂರು, ಪ್ರಮುಖರಾದ ಇಬ್ರಾಯಿಂಸಾಬ ಹಾಗೂ ಪ್ರಕಾಶ ಹಾದಿಮನಿ ಇದ್ದರು.

ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರವಿ ಅಂಗಡಿ ಮಾತನಾಡಿ,‘ಸಮಾಜಕ್ಕೆ ಮೌಲ್ಯಗಳನ್ನು ಬೋಧಿಸಿದ ಸಂತರು, ಶರಣರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸಬಾರದು’ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ರವೀಂದ್ರ ಸಜ್ಜನ್, ಸದಸ್ಯ ಶರಣಬಸಪ್ಪ ಭತ್ತದ ಅವರು ಮಾತನಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜುನಾಥರೆಡ್ಡಿ ಮಾದಿನಾಳ, ಖಾಜಾಸಾಬ ಗುರಿಕಾರ ಹಾಗೂ ಇತರರು ಇದ್ದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಿರ್ದೇಶಕರಾದ ಶೇಖರಪ್ಪ ಭಾವಿಕಟ್ಟಿ, ಸಗರಪ್ಪ ಕಂಪ್ಲಿ, ಸಿಬ್ಬಂದಿ ಮಂಜುನಾಥರೆಡ್ಡಿ ಎಚ್ ಮಾದಿನಾಳ, ಶಕ್ಷಾವಲಿ ಬಿಳಿಕುದುರಿ ಹಾಗೂ ವೀರೇಶ ಇದ್ದರು.

ಸಮೀಪದ ನವಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಜಯಂತಿಯಲ್ಲಿ ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪುರ, ಗ್ರಾ.ಪಂ. ಸದಸ್ಯ ಕಾಡನಗೌಡ, ಪ್ರಮುಖರಾದ ಮಲ್ಲಿಕಾರ್ಜುನ ಬಳಗಾನೂರು ಹಾಗೂ ನಿಂಗಪ್ಪ ನಾಯಕ ಇದ್ದರು.

‘ಆದರ್ಶ ಪಾಲಿಸಿ’

ತಾವರಗೇರಾ: ಪಟ್ಟಣದಲ್ಲಿ ಸರ್ಕಾರಿ ಕಚೇರಿಗಳು ಸೇರಿ ವಿವಿಧೆಡೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ವಿಕ್ರಮ್ ರಾಯ್ಕರ್ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಸಿಬ್ಬಂದಿ ಶ್ಯಾಮೂರ್ತಿ ಕಟ್ಟಮನಿ, ಮರೇಶ ನಾಯಕ ಸೇರಿ ಸಿಬ್ಬಂದಿ ಇದ್ದರು.

ನಾಡ ಕಚೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿ ಸೂರ್ಯಕಾಂತ ನಾಯಕ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಸಿಬ್ಬಂದಿ ಫಾರೂಕ್ ನಾಡಗೌಡ್ರು, ಮಹಾದೇವ ಪೂಜಾರ ಹಾಗೂ ಇತರರು ಇದ್ದರು.

‘ತಾಳ್ಮೆ, ಸಹನೆಯ ಮಾದರಿ’

ಕಾರಟಗಿ: ಪಟ್ಟಣದ ಪುರಸಭೆ ಕಚೇರಿಯಲ್ಲಿ ಸೋಮವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.

ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹೇಮರಡ್ಡಿ ಮಲ್ಲಮ್ಮ ಅವರ ಜೀವನದ ಕುರಿತು ಮಾತನಾಡಿದರು.

ಪ್ರಮುಖರಾದ ಜಿ. ತಿಮ್ಮನಗೌಡ, ರವಿರಾಜ್ ಪಾಟೀಲ,‌ ರಾಮರಾವ್ ಧರ್ಮಳ, ಜೆ. ಮಂಜುನಾಥ, ಈ. ನಾಗರಾಜ, ಆದೆಪ್ಪ, ಸಿಬ್ಬಂದಿ ರಾಘವೇಂದ್ರ, ಸುಮಾ ಕಂಚಿ, ಅಕ್ಷತ ಬಿ. ಕಮ್ಮಾರ, ಅನಂತರಾವ್, ಪುಷ್ಪಾವತಿ, ಆನಂದ, ಖಾದರ್‌ ಬಾಷಾ ಹಾಗೂ ಪೌರ ಕಾರ್ಮಿಕರು ಇದ್ದರು.

ಶಾಸಕರ ಕಚೇರಿ: ಬಿಜೆಪಿ ಪದಾಧಿಕಾರಿಗಳು ಶಾಸಕರ ಕಚೇರಿಯಲ್ಲಿ ಜಯಂತಿ ಆಚರಿಸಿದರು.

ಕಾರಟಗಿ ಶಕ್ತಿ ಕೇಂದ್ರದ ಅಧ್ಯಕ್ಷ ಶರಣಪ್ಪ ಗದ್ದಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಸ್ಕಿ ಮಾತನಾಡಿ,‘ಹೇಮರಡ್ಡಿ ಮಲ್ಲಮ್ಮ ತಾಳ್ಮೆ, ಸಹನೆಯ ಮಾದರಿಯಾಗಿದ್ದರು. ಸಾವಿರಾರು ಸಮಸ್ಯೆಗಳನ್ನು ಎದುರಿಸಿ ಬದುಕುವುದೇ ನಿಜವಾದ ಜೀವನ ಎಂದು ತೋರಿಸಿಕೊಟ್ಟಿದ್ದರು’ ಎಂದು ಬಣ್ಣಿಸಿದರು.

ಬಿಜೆಪಿ ಮಾಧ್ಯಮ ಸಂಚಾಲಕ ರಾಜುಗೌಡ, ಸಹ ಸಂಚಾಲಕರಾದ ಬಿ. ಮಂಜುನಾಥ, ಪ್ರಮುಖರಾದ ಬಸವರಾಜ ಅಂಗಡಿ, ರಾಜಶೇಖರ, ಸಿದ್ದಪ್ಪ ಹಾಲಸಮುದ್ರ, ಶಿವಾನಂದ ಹಾಗೂ ಮಂಜುನಾಥ ನಾಯಕ ಇದ್ದರು.

ವೃತ್ತದ ನಾಮಫಲಕಕ್ಕೆ ಪೂಜೆ: ಇಲ್ಲಿನ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಮಲ್ಲಮ್ಮರ ನಾಮಫಲಕಕ್ಕೆ ಪೂಜೆ ಸಲ್ಲಿಸಲಾಯಿತು. ರೆಡ್ಡಿ ಸಮಾಜದ ಅನೇಕರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು