ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ: 13, 14ನೇ ಶತಮಾನದ ವೀರ ಮಾಸ್ತಿಗಲ್ಲು ಪತ್ತೆ

ಬಿಲ್ಲು ಹಿಡಿದು ಬಾಣ ಸೆಳೆಯುತ್ತಿರುವ ವೀರನ ಚಿತ್ರ
Last Updated 24 ಜನವರಿ 2022, 4:29 IST
ಅಕ್ಷರ ಗಾತ್ರ

ಗಂಗಾವತಿ: ‘ನಗರದ ವಿರುಪಾಪುರ ತಾಂಡಾದ ರುದ್ರಭೂಮಿಯಲ್ಲಿ 13ನೇ ಶತಮಾನಕ್ಕೆ ಸಂಬಂಧಪಟ್ಟ ವೀರ ಮಾಸ್ತಿಗಲ್ಲು ಪತ್ತೆಯಾಗಿದ್ದು, ಅದನ್ನು ಆಂಜನೇಯ ದೇವಸ್ಥಾನದ ಬಳಿ ಇರಿಸಲಾಗಿದೆ’ ಎಂದು ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ.

‘ಈಚೆಗೆ ತಾಂಡಾದ ನಿವಾಸಿಗಳು ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗಾಗಿ ರುದ್ರಭೂಮಿಯಲ್ಲಿ ಮಣ್ಣು ತೆಗೆಯುತ್ತಿರುವ ವೇಳೆ ಶಿಲ್ಪ ಪತ್ತೆಯಾಗಿತ್ತು. ಇದು ನೋಡಲು ಕೆಂಪು ಕಣ ಶಿಲೆಯ ರೂಪದಲ್ಲಿದ್ದು, ಇದರ ಮೇಲ್ಭಾಗ ಈಶ್ವರಲಿಂಗ, ಅದರ ಎರಡೂ ಬದಿ ಸೂರ್ಯ, ಚಂದ್ರರ ಬಿಂಬಗಳಿವೆ. ಶಿಲ್ಪ ಭಾಗದಲ್ಲಿ ವೀರನ ಶಿಲ್ಪ ಪ್ರಧಾನವಾಗಿದೆ.

ಈ ಶಿಲ್ಪ ಹೋರಾಟದಲ್ಲಿ ತೊಡಗಿದ ಸಂದರ್ಭವನ್ನು ಸೂಚಿಸುತ್ತದೆ. ಜತೆಗೆ ವೀರನು ಎಡಗೈಯಲ್ಲಿ ಬಿಲ್ಲು ಹಿಡಿದು, ಬಲ ಗೈಯಿಂದ ಬಾಣಗಳನ್ನು ಸೆಳೆಯುತ್ತಿರುವ ರೀತಿ ಕಾಣುತ್ತಿದೆ. ಅವನ ಮುಂಭಾಗದಲ್ಲಿ ಶತ್ರುವೊಬ್ಬ ಎರಡು ಬಾಣಗಳು ತಾಗಿ ನೆಲಕ್ಕೆ ಕುಸಿದಿರುವ ದೃಶ್ಯವಿದೆ’ ಎಂದು ಹೇಳಿದರು.

ವೀರನ ಹಿಂಭಾಗದಲ್ಲಿ ಆತನ ಸತಿ ಶಿಲ್ಪವಿದ್ದು, ಯುದ್ಧದಲ್ಲಿ ಹೋರಾಡಿದ ವೀರ ಹಾಗೂ ವೀರನ ಕಳೆಬರದ ಜತೆ ಸತಿಹೋದ ಆತನ ಮಡದಿಯ ನೆನಪಿಗಾಗಿ ವೀರಮಾಸ್ತಿ ಕಲ್ಲನ್ನು ಹಾಕಿಸಲಾಗಿದೆ. ಶಿಲ್ಪ ಅಷ್ಟು ಕಲಾತ್ಮಕವಾಗಿಲ್ಲ.

ಆದರೆ ವೀರ ಮಾಸ್ತಿಗಲ್ಲುಗಳಿಂದ 13 ಮತ್ತು 14ನೇ ಶತಮಾನದಲ್ಲಿ ಗಂಗಾವತಿ ಭಾಗದ ಸೈನಿಕ ಹಾಗೂ ಸಾಮಾಜಿಕ ಘಟನೆಯೊಂದು ತಿಳಿದು ಬರುತ್ತದೆ ಎಂದು ಸಂಶೋಧಕ ಕೋಲ್ಕಾರ್ ಅಭಿಪ್ರಾಯಪಟ್ಟಿದ್ದಾರೆ.

ಈ ಶಿಲ್ಪದ ಪರಿಶೀಲನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಪಂಪಣ್ಣ ನಾಯಕ ಹಾಗೂ ದೇವಪ್ಪ ವಾಲೇಕರ ನೆರವಾಗಿರುವ ಕುರಿತು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT