ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಜೀವನ ಮಿಷನ್‌ನಿಂದ ಅನುಕೂಲ: ಸಂಸದ ಸಂಗಣ್ಣ ಕರಡಿ

ಪೈಪ್‌ಲೈನ್‌ ಕಾಮಗಾರಿಗೆ ಭೂಮಿಪೂಜೆ: ಸಂಸದ ಅಭಿಮತ
Last Updated 19 ಏಪ್ರಿಲ್ 2021, 4:28 IST
ಅಕ್ಷರ ಗಾತ್ರ

ನವಲಹಳ್ಳಿ (ತಾವರಗೇರಾ): ‘ಜಲ ಜೀವನ ಮಿಷನ್ ಯೋಜನೆಯಿಂದ ಮನೆ ಮನೆಗೆ ನೀರು ಪೂರೈಕೆಗೆ ಅನುಕೂಲವಾಗಲಿದೆ’ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದರು.

ಸಮೀಪದ ನವಲಹಳ್ಳಿ ಗ್ರಾಮದಲ್ಲಿ ಪೈಪ್‌ಲೈನ್‌ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಜಲ ಜೀವನ ಮಿಷನ್‌ ಯೋಜನೆ ಅಡಿ ನಾರಾಯಣಪುರದ ಬಸವಸಾಗರ ಜಲಾಶಯದ ಹಿನ್ನಿರನ್ನು ಈ ಭಾಗದ ನೀರಲೂಟಿ, ನವಲಹಳ್ಳಿ , ಹಂಚಿನಾಳ ಗ್ರಾಮಗಳಿಗೆ ಪೂರೈಕೆ ಮಾಡಲಾಗುವುದು’ ಎಂದು ಹೇಳಿದರು.

ಕುಷ್ಟಗಿ ತಾಲ್ಲೂಕಿನ 131 ಗ್ರಾಮಗಳಿಗೆ ನೀರೊದಗಿಸುವ ಅಂದಾಜು ₹33 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಅದರಲ್ಲಿ 3 ಗ್ರಾಮಗಳ ₹1.22 ಕೋಟಿ ವೆಚ್ಚದ ಕಾಮಗಾರಿಯನ್ನು ಎಲ್.ಟಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ’ ಎಂದರು. ಜಿ.ಪಂ. ಸದಸ್ಯ ಕೆ.ಮಹೇಶ ಮಾತನಾಡಿದರು.

‘ಎರಡು ಹೈಮಾಸ್ಟ್‌ ದೀಪ ಮತ್ತು ಈಶ್ವರ ದೇವಸ್ಥಾನದ ಕಟ್ಟಡ ನವೀಕರಣಕ್ಕೆ ಅನುದಾನ ಬಿಡುಗಡೆ ಮಾಡಬೇಕು’ ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.

ಗ್ರಾ.ಪಂ. ಅಧ್ಯಕ್ಷೆ ನಿರ್ಮಲಾ ಅರಳಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪರಶುರಾಮ ಚಿಟಿಗಿ ನಿರೂಪಿಸಿ, ವಂದಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಮಹೇಶ, ವಿಜಯಕುಮಾರ ನಾಯಕ, ಭೀಮಣ್ಣ ಅಗಸಿಮುಂದಿನ, ತಾ.ಪಂ. ಸದಸ್ಯ ಭೀಮಣ್ಣ ತಲೆಖಾನ, ಕುಷ್ಟಗಿ ಪುರಸಭೆ ಅಧ್ಯಕ್ಷ ಗಂಗಾಧರ ಹಿರೇಮಠ, ಸಂಗನಗೌಡ ಜೈನರ್, ತಾ.ಪಂ. ಸದಸ್ಯ ಮಹಾಂತೇಶ ಬಾದಾಮಿ, ಚಂದ್ರು ವಡಗೇರಿ , ಗ್ರಾ.ಪಂ. ಉಪಾಧ್ಯಕ್ಷ ದೇವಪ್ಪ ಸುಬೇದಾರ, ಗ್ರಾ.ಪಂ. ಸದಸ್ಯರಾದ ಹಂಪಮ್ಮ ಕೋರಿ, ಗಂಗಮ್ಮ ಕಂದಗಲ್, ಮುಖಂಡರಾದ ಆದನಗೌಡ ಡಿ ಪಾಟೀಲ, ದೊಡ್ಡನಗೌಡ ಜಿ ಪಾಟೀಲ, ಅಮರೇಗೌಡ, ಶರಣೆಗೌಡ ಪಾಟೀಲ, ಪ್ರಸನ್ನ ಕುಮಾರ ದೇಸಾಯಿ, ವಿ.ಬಿ ಅಂಗಡಿ, ದೊಡ್ಡಬಸವ ಪಾಟೀಲ, ಶರಣಬಸವ ಬಂಡೇರ, ಶರಣಪ್ಪ ಬುಕ್ಕಣ್ಣವರ ಹಾಗೂ ಶ್ಯಾಮಣ್ಣ ನಾರಿನಾಳ, ಎಂಜಿನಿಯರ್ ಚೈತ್ರಾ, ಪಿಡಿಒ ಅಂಬುಜಾ ಪಾಟೀಲ ಹಾಗೂ ಗ್ರಾಮದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT