ಕುಷ್ಟಗಿ: ‘ಬಸವತತ್ವ ಪ್ರತಿಪಾದಕ ಮಠಾಧೀಶರ ಮತ್ತು ಬಸವ ಸಂಸ್ಕತಿ ಅಭಿಯಾನ ಕೈಗೊಂಡ ಮಠಾಧೀಶರ ವಿರುದ್ಧ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲದ ಅವಹೇಳಕನಾರಿಯಾಗಿ ಮಾತನಾಡಿದ್ದು ಸರಿಯಲ್ಲ’ ಎಂದು ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಆಗಿರುವ ಇಲ್ಲಿಯ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಹೇಳಿದ್ದಾರೆ.

ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಕೆಲ ದಿನಗಳ ಹಿಂದೆ ನಡೆದಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಸಿದ ಮಠಾಧೀಶರ ಕುರಿತು ಮಾತನಾಡಿದ್ದು ಸರಿಯಲ್ಲ. ‘ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಂಡಿದ್ದ ಮಠಾಧೀಶರ ಕುರಿತು 'ಮುಖ್ಯಮಂತ್ರಿ ಕೃಪಾಪೋಷಿತ ಲಿಂಗಾಯತ ಮಠಾಧೀಶರ ಒಕ್ಕೂಟ, ಬಸವ ಸಂಸ್ಕೃತಿ ಅಭಿಯಾನ ಬಸವತತ್ವ ನಾಟಕದ ಕಲಾವಿದರು' ಎಂದು ಹೇಳಿ ಅಸಂವಿಧಾನಾತ್ಮಕ ಪದಗಳಿಂದ ನಿಂದಿಸಿರುವುದು ಸರಿಯಲ್ಲ, ಮುಂದಾದರೂ ತಮ್ಮ ನಡೆ ನುಡಿಯನ್ನು ಸ್ವಾಮೀಜಿ ತಿದ್ದಿಕೊಳ್ಳುವುದು ಉತ್ತಮ ಎಂದರು.

‘ಯಾರೇ ಕಾವಿಧಾರಿಗಳು ಅದಕ್ಕೆ ತಕ್ಕಂತೆ ಗೌರವಯುತವಾಗಿ ಮಾತನಾಡಿದರೆ ಕಾವಿ ತೊಟ್ಟಿದ್ದಕ್ಕೂ ಅರ್ಥವಿರುತ್ತದೆ. ಭಾಲ್ಕಿಯ ಪಟ್ಟದೇವರು ಸೇರಿದಂತೆ ಬಸವ ಸಂಸ್ಕೃತಿ ಸಮಿತಿಯ ಮಠಾಧೀಶರು ನಾಡಿನಲ್ಲಿ ಬಸವ ತತ್ವವನ್ನು ಹೊತ್ತೊಯ್ದು ಜನರಲ್ಲಿ ವೈಚಾರಿಕ ಜಾಗೃತಿ ಮೂಡಿಸುತ್ತಿದ್ದಾರೆ. ಹೀಗಿರುವಾಗ ಕನ್ಹೇರಿ ಸ್ವಾಮೀಜಿ ಬಸವತತ್ವ ಪ್ರತಿಪಾದಕರು ಹಾಗೂ ಆ ಮಠಾಧೀಪತಿಗಳ ವಿರುದ್ಧ ಅಪಮಾನಕರ ರೀತಿಯಲ್ಲಿ ಸಲ್ಲದ ಶಬ್ದಗಳನ್ನು ಬಳಸಿ ಮಾತನಾಡಿರುವುದು ಸರಿಯಲ್ಲ. ಇದರಿಂದ ಬಸವತತ್ವ ಪ್ರತಿಪಾದಿಸುವ ಸ್ವಾಮೀಜಿಗಳಿಗೆ ನೋವು ಆಗದೇ ಇರಬಹುದು ಆದರೆ ವೀರಶೈವ ಲಿಂಗಾಯತ ಸಮಾಜಕ್ಕೆ ಮಾತ್ರ ಬಹಳಷ್ಟು ನೋವು ಉಂಟಾಗಿದೆ’ ಎಂದರು.

‘ಹಿಂದೂತ್ವ, ಸನಾತನ ಸಂಸ್ಕೃತಿ ಪ್ರತಿಪಾದಿಸುತ್ತಿರುವ ಕನ್ಹೇರಿ ಸ್ವಾಮೀಜಿ ಮಾತನಾಡುವ ಧಾಟಿ ಗಮನಿಸಿದರೆ ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲದಿಂದ ಬಂದಿರುವ ಸಾಧ್ಯತೆ ಇರುವಂತಿದೆ. ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಗರಡಿಯಲ್ಲಿ ಬೆಳೆದಿರುವ ಇವರ ಬಾಯಲ್ಲಿ ಇಂಥ ಮಾತುಗಳು ಬರುತ್ತವೆ ಎಂಬುದನ್ನು ನಿರೀಕ್ಷಿಸಿರಲಿಲ್ಲ. ಒಂದೊಮ್ಮೆ ಸಿದ್ದೇಶ್ವರ ಶ್ರೀ ಬದುಕಿದ್ದರೆ ಕನ್ಹೇರಿ ಶ್ರೀ ಮಾತಿನಿಂದ ಅವರೂ ನೊಂದುಕೊಳ್ಳುತ್ತಿದ್ದರು’ ಎಂದು ಹೇಳಿದ್ದಾರೆ.