ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫೆ.17ರಂದು ಶ್ರೀಶೈಲ ಶಿವದೀಕ್ಷೆಯ ಶಿವಮಾಲಾಧಾರಣೆ

Published 14 ಫೆಬ್ರುವರಿ 2024, 15:58 IST
Last Updated 14 ಫೆಬ್ರುವರಿ 2024, 15:58 IST
ಅಕ್ಷರ ಗಾತ್ರ

ಕಾರಟಗಿ: ಪಟ್ಟಣದ ಸರ್ವೋದಯ ವೇದಿಕೆಯು 29ನೇ ವರ್ಷದ ಶ್ರೀಶೈಲದ ಶಿವದೀಕ್ಷೆಯ ಶಿವಮಾಲಾಧಾರಣದ ಅರ್ಧ ಮಂಡಲ (21 ದಿನ) ಕಾರ್ಯಕ್ರಮ ಫೆ. 17ರಂದು ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ನಾಗರಾಜ್‌ ಸಜ್ಜನ್‌, ಉಪಾಧ್ಯಕ್ಷ ಬಸವರಾಜ್‌ ತೊಂತನಾಳ ತಿಳಿಸಿದ್ದಾರೆ.

ಅಂದು ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಅರ್ಚಕ ಮುತ್ತಯ್ಯಸ್ವಾಮಿ ನೇತೃತ್ವದಲ್ಲಿ ವಿಶೇಷ ಪೂಜೆ, ಅಲಂಕಾರ, ಅರ್ಚನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಮಾಲಾಧಾರಣೆ ನಡೆಯಲಿದೆ ಎಂದು ಖಜಾಂಚಿ ಸೋಮನಾಥಸ್ವಾಮಿ ಗಣಾಚಾರಿ, ಕಾರ್ಯಾಧ್ಯಕ್ಷ ಬಸವರಾಜ ಕುಂಬಾರ ತಿಳಿಸಿದರು.

ಮೊದಲ ಸಾರಿ ಮಾಲೆ ಹಾಕುವವರು ಗಂಧದ ವರ್ಣದ, ಎರಡನೇ ಅಥವಾ ಅದಕ್ಕೂ ಹೆಚ್ಚು ಬಾರಿ ಹಾಕುವವರು ಆಕಾಶನೀಲಿ ವರ್ಣದ ಬಟ್ಟೆಗಳನ್ನು ಧರಿಸಬೇಕು. ಆಸಕ್ತರು ಫೆ. 15ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.

ಹೆಬ್ಬಾಳ ನಾಗಭೂಷಣ ಶಿವಾಚಾರ್ಯ, ಸುಳೇಕಲ್‌ ಭುವನೇಶ್ವರಯ್ಯತಾತ, ಅರಳಳ್ಳಿಯ ಗವಿಸಿದ್ದಯ್ಯತಾತ, ತಲೇಖಾನ ಮಠದ ವೀರಭದ್ರಯ್ಯತಾತ, ಕಟಿಗೆಹಳ್ಳಿಮಠದ ಸಿದ್ದಲಿಂಗಯ್ಯತಾತ, ಹಿರೇಮಠದ ಮರುಳಸಿದ್ದಯ್ಯಸ್ವಾಮಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಮಾಲಾಧಾರಣೆ ಮಾಡಿ, ಆಶೀರ್ವಚನ ನೀಡುವರು. ಪ್ರಮುಖರಾದ ಅರಳಿ ಮಲ್ಲಪ್ಪ, ಕೆ. ಸೂಗಪ್ಪ, ಕೊಟಗಿ ಶರಣಪ್ಪ, ಕುಳಗಿ ಗುಂಡಪ್ಪ ಪಾಲ್ಗೊಳ್ಳುವರು.

ಶಿವಮಾಲಾಧಾರಿಗಳಿಗೆ ಭೋಜನದ ವ್ಯವಸ್ಥೆಯನ್ನು ಉದ್ಯಮಿ ಕೆ.ಸೂಗಪ್ಪ, ಕೆ.ನಾಗಪ್ಪ ಮಾಡುವರು. ವಿವರಗಳಿಗೆ ನಾಗರಾಜ್‌ ಸಜ್ಜನ್‌ (9980727547) ಉಪಾಧ್ಯಕ್ಷ ಬಸವರಾಜ್‌ ತೊಂತನಾಳ (9880752256)ಗೆ ಸಂಪರ್ಕಿಸಲು ವೇದಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT