ಭಾನುವಾರ, ಮೇ 9, 2021
25 °C

ಸರಳವಾಗಿ ಕವನ ರಚಿಸಿ: ಲೇಖಕಿ ರುದ್ರಮ್ಮ ಹಾಸಿನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ‘ಸರಳವಾಗಿ ಕವನ ರಚಿಸಬೇಕು’ ಎಂದು ಹಿರಿಯ ಸಾಹಿತಿ ರುದ್ರಮ್ಮ ಹಾಸಿನಾಳ ಸಲಹೆ ನೀಡಿದರು.

ನಗರದ ಭುವನೇಶ್ವರಿ ಭವನದಲ್ಲಿ ಕಾವ್ಯಲೋಕ ಸಂಘಟನೆಯು ಅಖಿಲ ಕರ್ನಾಟಕ ಹರಿಹರ (ಹಕ್ಕ) ಬುಕ್ಕ ನಾಯಕ ಮಹಾವೇದಿಕೆ ಸಹಯೋಗದಲ್ಲಿ ಯುಗಾದಿ ಹಬ್ಬ, ಅಂಬೇಡ್ಕರ್ ಜಯಂತಿ ಮತ್ತು ವಿಜಯನಗರ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 96ನೇ ಕವಿಗೋಷ್ಠಿಯಲ್ಲಿ ಮಾತನಾಡಿದರು.

ಕವಿ-ಕವಿಯತ್ರಿಯರು ಜನಪರ ಸಾಹಿತ್ಯವನ್ನು ಮೈಗೂಡಿಸಿಗೊಳ್ಳಬೇಕು. ಜನಪರ ಸಾಹಿತ್ಯ ಓದುಗರಿಗೆ ಬೇಗ ತಲುಪುತ್ತದೆ ಎಂದರು.

ನಿವೃತ್ತ ಮುಖ್ಯೋಪಾಧ್ಯಯ ಬಸವರಾಜ ಮ್ಯಾಗಳಮನಿ ಮಾತನಾಡಿದರು.

ಮಂಜುಳಾ ಶ್ಯಾವಿ, ಸುರೇಶ ಜಿ.ಎಸ್, ಚನ್ನಕೇಶ, ರವಿತೇಜ, ವಿರುಪಣ್ಣ ಢಣಾಪುರ, ರಾಧಾ ಉಮೇಶ, ರಗಡಪ್ಪ ಹೊಸಳ್ಳಿ, ಶಾಮೀದ್‍ಲಾಠಿ, ಛತ್ರಪ್ಪ ತಂಬೂರಿ, ಕೃಷ್ಣಸಿಂಗ್, ಶಕುಂತಲ ನಾಯಕ, ಮೈಲಾರಪ್ಪ ಬೂದಿಹಾಳ, ಚಿದಂಬರ ಬಡಿಗೇರ, ಶಶಿಕುಮಾರ ಕೆ., ಸಲಾವುದ್ಧೀನ್ ಶಿರಹಟ್ಟಿ, ಮಲ್ಲೇಶಪ್ಪ ಅಂಗಡಿ, ರಾಹುಲ್, ಹರನಾಯಕ, ಕನಕ ಎಚ್. ಹೊಸ್ಕೇರ ಮತ್ತಿತರರು ಕವನ ವಾಚಿಸಿದರು. ಪುಸ್ತಕ ಪ್ರಾಧಿಕಾರ ಸದಸ್ಯ ಅಶೋಕಕುಮಾರ ರಾಯ್ಕರ್, ಕಾವ್ಯಲೋಕ ಗೌರವ ಅಧ್ಯಕ್ಷ ಡಾ.ಶಿವಕುಮಾರ ಮಾಲಿ ಪಾಟೀಲ, ರಾಜೇಶ ನಾಯಕ, ಕಾವ್ಯಲೋಕ ಅಧ್ಯಕ್ಷ ಎಂ.ಪರಶುರಾಮ ಪ್ರಿಯ, ಬಸವದಳ ಬ್ಯಾಂಕ್ ಅಧ್ಯಕ್ಷ ಬಸವರಾಜ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು