ಮಂಗಳವಾರ, ಜನವರಿ 28, 2020
19 °C

ಹಣಕ್ಕಾಗಿ ವ್ಯಕ್ತಿ ಅಪಹರಣ: ಇಬ್ಬರು ಆರೋಪಿಗಳ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಹಣಕ್ಕಾಗಿ ಸಮೀಪದ ನಿಲೋಗಲ್ ಗ್ರಾಮದ ಪರಸಪ್ಪ ಅವರನ್ನು ಅಪಹರಣ ಮಾಡಿದ್ದ ಇಬ್ಬರು ಆರೋಪಿಗಳನ್ನು ಹನುಮಸಾಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಗೇಶ್ವರ ಸತ್ಯನಾರಾಯಣ ನೆಕ್ಕಂಟಿ, ರಾಘವೇಂದ್ರ ಚಂದ್ರಶೇಖರ ಹೂಗಾರ ಬಂಧಿತ ಆರೋಪಿಗಳು.

ಘಟನೆ ಹಿನ್ನೆಲೆ: ನಿಲೋಗಲ್‌ನ ಪರಸಪ್ಪ ಅವರನ್ನು ಗ್ರಾಮದ ಹೊರವಲಯದಲ್ಲಿ ಡಿ.2ರಂದು ಅಪಹರಣ ಮಾಡಿದ್ದ ಆರೋಪಿಗಳು, ಆತನ ಮಗ ಭೀಮಪ್ಪ ಕೊತಬಾಳ ಅವರಿಗೆ ಕರೆಮಾಡಿ ‘ನಿಮ್ಮ ತಂದೆಯನ್ನು ಅಪಹರಿಸಿದ್ದು, ಬಿಡುಗಡೆಗೆ ₹ 1 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣ ನೀಡದೆ ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ ನೇತೃತ್ವದಲ್ಲಿ ಕುಷ್ಟಗಿ ಸಿಪಿಐ ಚಂದ್ರಶೇಖರ ಹಾಗೂ ಹನುಮಸಾಗರ ಪಿಎಸ್‍ಐ ಅಮರೇಶ ಹುಬ್ಬಳ್ಳಿ, ಸಿಬ್ಬಂದಿಗಳಾದ ಡಿ.ಕೆ.ನಾಯಕ್, ಬಸವರಾಜ ಗೌಡರ, ರವಿ ನಡುವಿನಮನಿ, ಶ್ರೀಧರ ಅವರನ್ನು ಒಳಗೊಂಡ ತಂಡವು ದೂರು ದಾಖಲಾದ 18 ಗಂಟೆಗಳ ಒಳಗಾಗಿ ಕಾರಟಗಿ ಬಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿಗಳಿಂದ ಇಂಡಿಕಾ ಕಾರು, ಎರಡು ಮೊಬೈಲ್‌ ಸೇರಿದಂತೆ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಹಣಕ್ಕಾಗಿ ಅಪಹರಣ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು