ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್‌: ನಿರ್ದೇಶಕರಾಗಿ 13 ಜನ ಅವಿರೋಧ ಆಯ್ಕೆ

Published 22 ಜೂನ್ 2024, 16:04 IST
Last Updated 22 ಜೂನ್ 2024, 16:04 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲಾ ಸಹಕಾರ ಯೂನಿಯನ್‌ ನಿಯಮಿತದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಶನಿವಾರ 13 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೊಪ್ಪಳ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತಕ್ಷೇತ್ರದಿಂದ ಘಟ್ಟಿರೆಡ್ಡಿಹಾಳ ಗ್ರಾಮದ ಅಂದಾನಪ್ಪ ಡಂಬಳ, ಕುಷ್ಟಗಿ ತಾಲ್ಲೂಕು ಕ್ಷೇತ್ರದಿಂದ ಗುಮಗೇರಾದ ಶೇಖರಗೌಡ ಮಾಲಿಪಾಟೀಲ, ಗಂಗಾವತಿ ತಾಲ್ಲೂಕು ಕ್ಷೇತ್ರದಿಂದ ಜಂಗಮರ ಕಲ್ಗುಡಿಯ ಸಿ.ಎಚ್‌. ಸತ್ಯನಾರಾಯಣ, ಯಲಬುರ್ಗಾ ಹಾಗೂ ಕುಕನೂರು ಮತಕ್ಷೇತ್ರದಿಂದ ಕುಕನೂರಿನ ಶಂಭುಲಿಂಗಪ್ಪ ಜೋಳದ ನಿರ್ದೇಶಕರಾಗಿ ಆಯ್ಕೆಯಾದರು.

ಕೊಪ್ಪಳ, ಗಂಗಾವತಿ, ಕಾರಟಗಿ, ಕನಕಗಿರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮತಕ್ಷೇತ್ರದಿಂದ ಕಿನ್ನಾಳದ ದಾದಫೀರ್ ಗೋನೆಗೊಂಡಲ, ಕುಷ್ಟಗಿ, ಯಲಬುರ್ಗಾ, ಕುಕನೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಮತಕ್ಷೇತ್ರದಿಂದ ಹನುಮನಾಳದ ಮಹಾಂತೇಶ ಸಜ್ಜನ, ಜಿಲ್ಲೆಯ ಮಹಿಳಾ ಸಂಘಗಳ ಕ್ಷೇತ್ರದಿಂದ ಕೊಪ್ಪಳದ ಶಕುಂತಲಾ ಹುಡೇಜಾಲಿ, ಜಿಲ್ಲೆಯ ಪಟ್ಟಣ ಪತ್ತಿನ ನೌಕರರ ಸಹಕಾರ ಸಂಘದ ಕ್ಷೇತ್ರದಿಂದ ಮುದ್ದಾಬಳ್ಳಿಯ ರಾಜೀವ್‌ ಭೀಮರಡ್ಡಿ ಮಾದಿನೂರು, ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳ ಕ್ಷೇತ್ರದಿಂದ ಕುಕನೂರಿನ ಭೀಮರಡ್ಡಿ ಶ್ಯಾಡ್ಲಗೇರಿ, ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟಗಾರರ ಸಹಕಾರ ಸಂಘದಿಂದ ಕುಕನೂರು ತಾಲ್ಲೂಕಿನ ಗಾವರಾಳದ ಮಾರುತಿ ಹೊಸಮನಿ, ಜಿಲ್ಲೆಯ ಕೃಷಿ ಸಂಸ್ಕರಣ ಸಹಕಾರ ಸಂಘಗಳ ಮತಕ್ಷೇತ್ರದ ಕುಷ್ಟಗಿ ತಾಲ್ಲೂಕಿನ ಗುಮಗೇರಿಯ ವೆಂಕಟೇಶ ದಾಸಪ್ಪ ಶೆಟ್ಟರ್‌, ಜಿಲ್ಲೆಯ ಕೈಗಾರಿಕಾ ಸಹಕಾರ ಸಂಘಗಳ ಕ್ಷೇತ್ರದಿಂದ ಕೊಪ್ಪಳದ ಹಾಲಯ್ಯ ಹುಡೇಜಾಲಿ ಮತ್ತು ಜಿಲ್ಲೆಯ ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಕೊಪ್ಪಳ ತಾಲ್ಲೂಕು ಹ್ಯಾಟಿ ಗ್ರಾಮದ ತೋಟಪ್ಪ ಕಾಮನೂರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಒಟ್ಟು 14 ನಿರ್ದೇಶಕ ಸ್ಥಾನಗಳಿದ್ದು, ಇದರಲ್ಲಿ ಶೇಖರಗೌಡ ಮಾಲಿಪಾಟೀಲ ಪೆನಲ್‌ನ 13 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರಟಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮತಕ್ಷೇತ್ರದಿಂದ ಒಂದು ನಿರ್ದೇಶಕ ಸ್ಥಾನಕ್ಕೆ ಇದೇ 28ರಂದು ಚುನಾವಣೆ ಜರುಗಲಿದೆ.

ವಿವಿಧ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿದ್ದವರಲ್ಲಿ ತಲಾ ಒಬ್ಬರನ್ನು ಹೊರತುಪಡಿಸಿ ಉಳಿದವರು ನಾಮಪತ್ರ ವಾಪಸ್‌ ಪಡೆದುಕೊಂಡಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. 28ರಂದು ಚುನಾವಣಾ ಪ್ರಕ್ರಿಯೆ ಮುಗಿದ 15 ದಿನಗಳಲ್ಲಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT