ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದುರ್ಬಲರಿಗೆ ಸಹಾಯ ನೆರವು ನೀಡಿ

Published 17 ಜೂನ್ 2024, 15:42 IST
Last Updated 17 ಜೂನ್ 2024, 15:42 IST
ಅಕ್ಷರ ಗಾತ್ರ

ಕನಕಗಿರಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಸೋಮವಾರ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಾವಿರಾರು ಸಂಖ್ಯೆಯ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಜಾಮಿಯಾ ಮಸೀದಿಯ ಮೌಲಾನಾ ಮಹ್ಮದ ಸಜ್ಜಾದ ರಜಾ ನೂರಿ ಮಾತನಾಡಿ, ‘ತ್ಯಾಗ, ಬಲಿದಾನದ ಪ್ರತೀಕವಾಗಿ ಬಕ್ರೀದ್ ಆಚರಿಸಲಾಗುತ್ತಿದೆ. ಅನ್ಯ ಮಾರ್ಗದಲ್ಲಿ ಹಣ ಗಳಿಸದೆ ಶ್ರಮದ ಹಣವನ್ನು ಬಡ, ಮಧ್ಯಮ ವರ್ಗದ ಜನರಿಗೆ ದಾನ ಮಾಡಿದಾಗ ದೇವರು ಸ್ವರ್ಗ ಪ್ರಾಪ್ತಿ ಮಾಡುತ್ತಾನೆ’ ಎಂದು ತಿಳಿಸಿದರು.

ಇಬ್ರಾಹಿಂ ಮಸೀದಿಯ ಆಫೀಜ್ ಸಮೀರ್ ರಜ್ವಿ, ಪಿಐ ಎಂ.‌ಡಿ.‌ಫೈಜುಲ್ಲಾ, ಎಪಿಎಂಸಿ ಮಾಜಿ ನಿರ್ದೇಶಕ ಇಮಾಮಸಾಬ ಎಲಿಗಾರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೊನ್ನೂರುಸಾಬ ಮೇಸ್ತ್ರಿ, ಜಾಮಿಯಾ ಮಸೀದಿ ಸಮಿತಿ ಅಧ್ಯಕ್ಷ ಮೈಬೂಬಸಾಬ ಗುರಿಕಾರ, ಈದ್ಗಾ ಕಮಿಟಿಯ ಅಧ್ಯಕ್ಷ ಹೊನ್ನೂರಸಾಬ ಕಳ್ಳಿ, ಪಟ್ಟಣ ಪಂಚಾಯಿತಿ ಸದಸ್ಯ ರಾಜಾಸಾಬ ನಂದಾಪುರ, ಮಾಜಿ ಸದಸ್ಯ ಪಾಷಸಾಬ ಮುಲ್ಲಾರ, ಪ್ರಮುಖರಾದ ಬಾಬುಸಾಬ ಮುಲ್ಲಾರ, ಚಂದುಸಾಬ ಗುರಿಕಾರ, ಯಮನೂರಸಾಬ ಬಾಗಲಿ, ಶಾಮೀದಸಾಬ ಲೈನದಾರ, ಅಮೀನಸಾಬ ಮಕಾನಸಾರ, ಸೇರಿದಂತೆ ಇತರರು ಹಾಜರಿದ್ದರು.

ಚಿಕಿತ್ಸೆಗೆ ನೆರವು: ಗಂಗಾವತಿ ಪಟ್ಟಣದ ಶಾಮೀದ ಅಲಿ ನದಾಫ್ ಅವರು ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ನೆರವು ನೀಡಿದರು.

ಮದೀನಾ ಈದ್ಗಾ ಮೈದಾನ: ಕೊಪ್ಪಳ ರಸ್ತೆಯಲ್ಲಿರುವ ಮದೀನಾ ಈದ್ಗಾ ಮೈದಾನದಲ್ಲಿ ಬಕ್ರೀದ್ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ನೂರಾನಿ ಮಸೀದಿಯ ಮೌಲಾನಾ ಅಬ್ದುಲ್ ಅಫೀಜ್ ಕ್ವಾಟಿ ಕುರಾನ್ ಪಠಣ ಮಾಡಿದರು.

ಈ ವೇಳೆಯಲ್ಲಿ ಸಮಾಜದ ಪ್ರಮುಖರಾದ, ಶೌಕತ್ ಅಲಿ ನಡಲಮನಿ, ಶರೀಫ್ ವಟಪರ್ವಿ, ಹುಸೇನ್ ಬಿಳಿಕುದುರಿ, ಹೊನ್ನುರಸಾಬ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT