ಕೊಪ್ಪಳ: ಎರಡು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ತಂದೆಯ ದಿವಸದ ಕಾರ್ಯಕ್ರಮಕ್ಕೆ ಸಂಬಂಧಿಕರನ್ನು ಕರೆದುಕೊಂಡು ಬರಲು ಹೋಗಿದ್ದ ಮಗ ಕೂಡ ರಸ್ತೆ ಅಪಘಾತದಲ್ಲಿ ಧಾರುಣವಾಗಿ ಮೃತಪಟ್ಟಿದ್ದಾನೆ.

ತಾಲ್ಲೂಕಿನ ಇಂದರಗಿ ಬಳಿ ಬುಧವಾರ ರಾತ್ರಿ ನಡೆದ ಅಪಘಾತದಲ್ಲಿ ರಾಜಾಹುಸೇನ್ ಮೃತಪಟ್ಟಿದ್ದು, ಇವರ ತಂದೆ ಬುಡನಸಾಬ್ ಕೂಡ ಎರಡು ದಿನಗಳ ಹಿಂದೆಯಷ್ಟೇ ಸಾವನ್ನಪ್ಪಿದ್ದರು. ಇಂದರಗಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ವಾಜೀದ್ ಹಾಗೂ ಆಸೀಫ್ ಕೂಡ ಸಂಬಂಧಿಕರಾಗಿದ್ದಾರೆ. ಮೂರು ದಿನಗಳ ಅವಧಿಯಲ್ಲಿ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇದರಿಂದಾಗಿ ಕುಟುಂಬದವರು ದುಖಃದ ಕಟ್ಟೆಯೊಡೆದಿತ್ತು.

ಕಳ್ಳತನ: ಕೊಪ್ಪಳದ ಚನ್ನಬಸವ ನಗರದ ವಾಸವಾಗಿರುವ ಮಂಜುನಾಥ ಬಡಿಗೇರ ಎಂಬುವರ ಮನೆಯ ಮುಖ್ಯದ್ವಾರ ಒಡೆದು ಕಳ್ಳತನ ಮಾಡಲಾಗಿದೆ.

ಮೀನಾಕ್ಷಿ ಕಮ್ಮಾರ ಎಂಬುವರ ಮನೆಯಲ್ಲಿ ಮಂಜುನಾಥ ವಾಸವಿದ್ದು, ಬೆಡ್ರೂಂನಲ್ಲಿದ್ದ ₹50 ಸಾವಿರ ನಗದು ಹಾಗೂ ಚಿನ್ನಾಭರಣ ಸೇರಿ ಒಟ್ಟು ₹1.47 ಲಕ್ಷ ಕಳ್ಳತನ ಮಾಡಲಾಗಿದೆ ಎಂದು ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ರೀತಿಯ ಇನ್ನೊಂದು ಘಟನೆ ನಡೆದಿದ್ದು, ವೈದ್ಯಕೀಯ ಕಾಲೇಜು ಹತ್ತಿರದ ರಾಜಾಜಿನಗರದಲ್ಲಿ ಶ್ರೀನಿವಾಸಲು ಎಂಬುವವರ ಮನೆಯಲ್ಲಿ ₹1.42 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.