ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳವಂಡಿ | 'ತುರ್ತು ಪೊಲೀಸ್ ಸೇವೆಗೆ 112 ಕ್ಕೆ ಕರೆ ಮಾಡಿ'

Published 1 ಮೇ 2024, 14:51 IST
Last Updated 1 ಮೇ 2024, 14:51 IST
ಅಕ್ಷರ ಗಾತ್ರ

ಅಳವಂಡಿ: ಇಲ್ಲಿನ ಪೋಲಿಸ್ ಠಾಣೆಯಲ್ಲಿ ಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಟ್ಟಿ, ಬೆಳಗಟ್ಟಿ, ಘಟ್ಟಿರಡ್ಡಿಹಾಳ ಹಾಗೂ ಮುರ್ಲಾಪುರ ಗ್ರಾಮದ ಸ್ಪೂರ್ತಿ ಯೋಜನೆ (ಕೆಎಚ್‌ಪಿಟಿ)ಯ ಮಕ್ಕಳಿಗೆ ಪೋಲಿಸ್ ಇಲಾಖೆಯ ವತಿಯಿಂದ ತೆರೆದ ಮನೆ ಕಾರ್ಯಕ್ರಮ ನಡೆಯಿತು.

ಪೋಲಿಸ್ ಇಲಾಖೆಯ ಸಿಬ್ಬಂದಿ ಮಲ್ಲೇಶ ಮಾತನಾಡಿ, ಮಕ್ಕಳು ಪೋಲಿಸ್ ಠಾಣೆ ಹಾಗೂ ಪೋಲಿಸರು ಎಂದರೇ ಯಾವುದೇ ರೀತಿ ಭಯಪಡಬಾರದು. ಏನೇ ಸಮಸ್ಯೆ ಇದ್ದರೂ ನಮಗೆ ತಿಳಿಸಿ ಕೂಡಲೇ ಪರಿಹಾರ ಒದಗಿಸಲಾಗುವುದು. ಆಗ್ನಿ ಅನಾಹುತ, ವಿಪತ್ತು ಸಂದರ್ಭ, ಅಪಘಾತ, ಕಳ್ಳತನ, ಜಗಳ, ಅಕ್ರಮ ಮದ್ಯ ಮಾರಾಟ, ಮ‌ಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ, ಮಹಿಳೆಯರ ಹಾಗೂ ಹಿರಿಯ ನಾಗರಿಕರ ರಕ್ಷಣೆಗಾಗಿ ಮುಂತಾದ ಸಂದರ್ಭಗಳಲ್ಲಿ ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದರೇ ತುರ್ತಾಗಿ ಸ್ಪಂದಿಸಿ ನಿಮ್ಮ ನೆರವಿಗೆ ಧಾವಿಸಲಾಗುತ್ತದೆ ಎಂದರು.

ಬಾಲ್ಯ ವಿವಾಹ, ಪೋಕ್ಸೊ ಕಾಯಿದೆ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ, ಲೈಂಗಿಕ ದೌರ್ಜನ್ಯ ತಡೆಯುವ ಕುರಿತು, ಪೋಲಿಸ್ ಇಲಾಖೆಯ ಕಾರ್ಯ ಚಟುವಟಿಕೆಯ ಬಗ್ಗೆ, ಗನ್, ಬಂದೂಕು, ವಾಕಿಟಾಕಿ ಸೇರಿದಂತೆ ಠಾಣೆಯ ಕಾರ್ಯ ವೈಖರಿಯ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು. ಪೋಲಿಸ್ ವ್ಯವಸ್ಥೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು.

ಪೋಲಿಸ್ ಇಲಾಖೆಯ ಜಂದಿಪೀರ, ಗವಿಸಿದ್ದಪ್ಪ , ಕೆಎಚ್ ಪಿಟಿಯ ಸಮುದಾಯ ಸಂಘಟಕಿ ಜುನಾಬಿ ವಡ್ಡಟ್ಟಿ, ಶಿಕ್ಷಕಿ ನೇತ್ರಾ ಹಾಗೂ ವಿದ್ಯಾರ್ಥಿಗಳು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT