ಮುನಿರಾಬಾದ್: ‘ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ, ಬದಲಿಗೆ ಹೊಣೆಗಾರಿಕೆಯಾಗಿದೆ’ ಎಂದು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.
ಇಲ್ಲಿನ ಭಾರತೀಯ ಎಂಜಿನಿಯರ್‌ಗಳ ಸಂಘದ ಆಶ್ರಯದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿ ಹೋದ ಪ್ರಕರಣ ಉಲ್ಲೇಖಿಸಿ ಮಾತನಾಡಿದ ಅವರು, ‘ಜಲಾಶಯ ನಿರ್ಮಾಣ ಸಂದರ್ಭದಲ್ಲಿ ತಯಾರಿಸಿದ ನಕ್ಷೆ ಮತ್ತು ವಿನ್ಯಾಸ ನಿಖರವಾಗಿದೆ. ಅದರ ಅನ್ವಯ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು ಯಶಸ್ವಿಯಾಗುವ ಭರವಸೆ ಇದೆ’ ಎಂದರು.
ಸಂಘದ ಅಧ್ಯಕ್ಷ ಎಸ್.ಎಂ.ಶಶಿಧರ ಮಾತನಾಡಿದರು. ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ(ಎಂ.ಡಿ.) ರಾಜೇಶ ಅಮ್ಮಿನಭಾವಿ, ತುಂಗಭದ್ರಾ ಯೋಜನೆಯ ಪ್ರಭಾರ ಮುಖ್ಯ ಎಂಜಿನಿಯರ್ ಎಲ್. ಬಸವರಾಜ, ಸಂಸ್ಥೆಯ ಸದಸ್ಯರಾದ ಪ್ರಹ್ಲಾದ, ಸೈಯದ್ ನದೀಮುಲ್ಲಾ ಖಾದ್ರಿ, ಜಿ. ನಂದಿನಿ ಇತರರು ಉಪಸ್ಥಿತರಿದ್ದರು.