ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘11 ಬ್ರಿಡ್ಜ್ ಕಂ ಬ್ಯಾರೇಜ್‌ಗಳಿಗೆ ₹39.80 ಕೋಟಿ’

Published 3 ಜುಲೈ 2024, 14:24 IST
Last Updated 3 ಜುಲೈ 2024, 14:24 IST
ಅಕ್ಷರ ಗಾತ್ರ

ಕುಕನೂರು: ‘ತಾಲ್ಲೂಕಿನ 11 ಗ್ರಾಮಗಳ ಹಳ್ಳಗಳಿಗೆ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ನಿಟ್ಟಾಲಿಯಲ್ಲಿ ಜಿನುಗು ಕೆರೆ ನಿರ್ಮಾಣಕ್ಕೆ ₹39.80 ಕೋಟಿ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಬಳಿಕ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಪರ್ಕ ಸುಧಾರಣೆ ಮತ್ತು ಅಂತರ್ಜಲ ಮಟ್ಟ ಹೆಚ್ಚಳದ ಉದ್ದೇಶದಿಂದ ಅನುದಾನ ಬಿಡುಗಡೆ ಮಾಡಿಸಿದ್ದೇನೆ’ ಎಂದರು.

ಎಲ್ಲೆಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್: ತಾಲ್ಲೂಕಿನ ಬಳಗೇರಿ-ಬೂದಗುಂಪಾ ಗ್ರಾಮಗಳ ನಡುವಿನ ಹಳ್ಳಕ್ಕೆ ₹9.90 ಕೋಟಿ, ಯಲಬುರ್ಗಾ ತಾಲ್ಲೂಕಿನ ಗುಂಟುಮಡು ಹಳ್ಳಕ್ಕೆ ₹4.75 ಕೋಟಿ, ತಾಲ್ಲೂಕಿನ ಸಿದ್ನೆಕೊಪ್ಪದಿಂದ ಯರೆಹಂಚಿನಾಳ ಮಧ್ಯದ ಹಳ್ಳಕ್ಕೆ ₹2.50 ಕೋಟಿ, ಮನ್ನಾಪೂರ ಮತ್ತು ಮಾಳೆಕೊಪ್ಪ ನಡುವಿನ ಹಳ್ಳಕ್ಕೆ ₹3.20 ಕೋಟಿ, ತಾಲ್ಲೂಕಿನ ಬಂಡಿ ಮತ್ತು ಕಡಬಲಕಟ್ಟಿ ಗ್ರಾಮದ ಮಧ್ಯೆ ಹರಿಯುವ ಹಳ್ಳಕ್ಕೆ ₹1.50 ಕೋಟಿ ಹಾಗೂ ಬಳೂಟಗಿ ಗ್ರಾಮದ ಹತ್ತಿರ ಹರಿಯುವ ಹಳ್ಳಕ್ಕೆ ₹1.80 ಕೋಟಿ, ಕುಕನೂರು ತಾಲ್ಲೂಕಿನ ತಳಕಲ್ಲ-ಕೋಮಲಾಪೂರ ಮಧ್ಯದ ಹಳ್ಳಕ್ಕೆ ₹2.75 ಕೋಟಿ, ಮದ್ಲೂರು-ಲಗಳೂರು ಮಧ್ಯೆ ಹರಿಯುವ ಹಳ್ಳಕ್ಕೆ ₹3.35 ಕೋಟಿ, ಚಿಕೇನಕೊಪ್ಪದ ಹಳ್ಳಕ್ಕೆ ₹2.40 ಕೋಟಿ, ಶಿಡ್ಲಬಾವಿ ಹಳ್ಳಕ್ಕೆ ₹2 ಕೋಟಿ, ಸೋಂಪುರು- ಮಾಳೇಕೊಪ್ಪ ಮಧ್ಯೆ ಹರಿಯುವ ಹಳ್ಳಕ್ಕೆ ₹3.20 ಕೋಟಿ, ನಿಟ್ಟಾಲಿ ಗ್ರಾಮದ ಸರ್ವೆ ನಂ.11ರಲ್ಲಿ ನೂತನ ಜಿನುಗು ಕೆರೆ ನಿರ್ಮಾಣಕ್ಕೆ 2.45 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT