ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕೋಲ್ಡ್ ಸ್ಟೋರೆಜ್ ಕಾಮಗಾರಿಗೆ ಶೀಘ್ರ ಚಾಲನೆ’

Published 2 ಆಗಸ್ಟ್ 2024, 14:27 IST
Last Updated 2 ಆಗಸ್ಟ್ 2024, 14:27 IST
ಅಕ್ಷರ ಗಾತ್ರ

ಕುಕನೂರು: ‘ಪಟ್ಟಣದ ಎಪಿಎಂಸಿಯಲ್ಲಿ ಕೋಲ್ಡ್ ಸ್ಟೋರೆಜ್ ಕಾಮಗಾರಿ ಜತೆ ಭಗೀರಥ ಭವನದಲ್ಲಿ ಕೆಇಬಿ ಕಾರ್ಯ ಮತ್ತು ಪಾಲನಾ ವಿಭಾಗ ಕಚೇರಿಯ ಆರಂಭವಾಗುತ್ತಿದೆ. ಇದರಿಂದ ತಾಲ್ಲೂಕಿನ ರೈತರಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ’ ಎಂದು ಕಾಂಗ್ರೆಸ್ ಮುಖಂಡ, ಉದ್ಯಮಿ ಸತ್ಯನಾರಾಯಣಪ್ಪ ಹರಪನಹಳ್ಳಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಎಪಿಎಂಸಿಯಲ್ಲಿ ₹7 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೆಜ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಹೆಸರು, ಕಡಲೆ, ತರಕಾರಿ, ಜೋಳ, ದಾಳಿಂಬೆ, ಶೇಂಗಾ ಸೇರಿ ಅನೇಕ ಬೆಳೆಗಳನ್ನು ಸಂಗ್ರಹಿಸಲು ಅನುಕೂಲವಾಗಲಿದೆ’ ಎಂದರು.

ಪ.ಪಂ ಸದಸ್ಯ ಸಿರಾಜ್ ಕರಮುಡಿ ಮಾತನಾಡಿ, ‘ಪಟ್ಟಣದ ಭಗೀರಥ ಭವನದಲ್ಲಿ ಜೆಸ್ಕಾಂ ಎಇಇ ಕಚೇರಿ ಕಾರ್ಯ ಮತ್ತು ಪಾಲನಾ ವಿಭಾಗ ಕಚೇರಿ ಆರಂಭವಾಗುವುದರಿಂದ ರೈತರಿಗೆ ಯಲಬುರ್ಗಾ ಪಟ್ಟಣಕ್ಕೆ ಹೋಗುವ ಸಮಸ್ಯೆ ತಪ್ಪಲಿದೆ. ರೈತರಿಗೆ ಟಿಸಿ ಸಮಸ್ಯೆ ಸೇರಿದಂತೆ ಅನೇಕ ಲೈನ್‍ಗಳ ಚಾಲನೆ, ಬದಲಾವಣೆಗೆ ಅನುಕೂಲವಾಗಲಿದೆ’ ಎಂದರು.

ಸಂಗಮೇಶ ಗುತ್ತಿ, ಸಿದ್ದಯ್ಯ ಕಳ್ಳಿಮಠ, ರೇಹಮಾನಸಾಬ ಮಕ್ಕಪ್ಪನವರ್, ಗಗನ್ ನೋಟಗಾರ, ಪ್ರಶಾಂತ ಆರ್‍ಬೆರಳ್ಳಿನ್, ಮಾಲತೇಶ ಮುಧೋಳ, ಮಂಜುನಾಥ ಯಡಿಯಾಪೂರ, ಸಿದ್ದು ದೊಡ್ಡಮನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT