ಕುಷ್ಟಗಿ (ಕೊಪ್ಪಳ ಜಿಲ್ಲೆ): ಜಮೀನೊಂದರ ಕೃಷಿ ಹೊಂಡದಲ್ಲಿ ಆಕಸ್ಮಿಕವಾಗಿ ಬಿದ್ದು ಇಬ್ಬರು ಮಕ್ಕಳು ಅಸುನೀಗಿದ ಘಟನೆ ತಾಲ್ಲೂಕಿನ ಬಿಜಕಲ್ ಗ್ರಾಮದ ಹೊರವಲಯ ಸೋಮವಾರ ನಡೆದಿದೆ.

ಗ್ರಾಮದ ಮಲ್ಲಮ್ಮ ತಂದೆ ನೀಲಪ್ಪ ತೆಗ್ಗಿನಮನಿ (11) ಮತ್ತು ಬಿಜಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಗಪ್ಪ ತೆಗ್ಗಿನಮನಿ ಅವರ ಪುತ್ರ ಶ್ರವಣಕುಮಾರ (8) ಮೃತರು.
.ಕೊಪ್ಪಳ| ಗವಿಸಿದ್ಧಪ್ಪ ಕೊಲೆ: ವಾಲ್ಮೀಕಿ ಮಹಾಸಭಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ.
ಜಮೀನಿಗೆ ಕುಟುಂಬ ಸದಸ್ಯರೊಂದಿಗೆ ತೆರಳಿದ್ದ ಮಕ್ಕಳು, ಯಾರು ಇಲ್ಲದ ಸಮಯದಲ್ಲಿ ಕೃಷಿ ಹೊಂಡದ ಬಳಿ ತೆರಳಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ಕೃಷಿಹೊಂಡ ತುಂಬಿಕೊಂಡಿದೆ. ಆಕಸ್ಮಿಕವಾಗಿ ಎರಡೂ ಮಕ್ಕಳು ತುಂಬಿದ ಹೊಂಡದಲ್ಲಿ ಕಾಲು ಜಾರಿ ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ. ಮಕ್ಕಳು ನೀರಲ್ಲಿ ಜಾರಿ ಬಿದ್ದ ತಿಳಿದ ಕುಟುಂಬದವರು ಮಕ್ಕಳನ್ನು ಆಚೆ ತೆಗೆದು ಕೂಡಲೇ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಆದರೆ, ಮಕ್ಕಳ ತಪಾಸಣೆ ನಡೆಸಿದ ಕರ್ತವ್ಯದಲ್ಲಿದ್ದ ತಜ್ಞ ವೈದ್ಯ ಮನೋಜ ಅವರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದರು.
.ಕೊಪ್ಪಳ | ರಸಗೊಬ್ಬರಕ್ಕೆ ಮತ್ತೆ ಬೇಡಿಕೆ: ಪೊಲೀಸ್ ಕಣ್ಗಾವಲಿನಲ್ಲಿ ವಿತರಣೆ.
ನೀಲಪ್ಪ ಹಾಗೂ ಸಂಗಪ್ಪ ಇವರು ಸಹೋದರರ ಮಕ್ಕಳಾಗಿದ್ದಾರೆ. ಮಕ್ಕಳ ಮೃತದೇಹ ಕಂಡ ಪಾಲಕರು ಮತ್ತು ಕುಟುಂಬಸ್ಥರ ಆಕ್ರಂದನ ಆಸ್ಪತ್ರೆ ಆವರಣದಲ್ಲಿ ಸೇರಿದ್ದ ಸಾರ್ವಜನಿಕರ ಕಣ್ಣಂಚು ತೇವಗೊಳಿಸಿತು. ಆಸ್ಪತ್ರೆಗೆ ಭೇಟಿ ನೀಡಿದ ಸ್ಥಳೀಯ ಪೊಲೀಸರು ವಿಚಾರಣೆ ನಡೆಸಿ ಘಟನಾ ಮಾಹಿತಿ ಪಡೆದುಕೊಂಡಿದ್ದಾರೆ.
.ಕೊಪ್ಪಳ | ಗವಿಸಿದ್ಧಪ್ಪ ನಾಯಕ ಕೊಲೆ ಪ್ರಕರಣ: ನಾಲ್ಕು ಆರೋಪಿಗಳ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.