ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಕಾರ್ಮಿಕರ ಮುಷ್ಕರ

ತಿದ್ದುಪಡಿ ಕಾಯ್ದೆ ವಾಪಸ್‌, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
Last Updated 27 ನವೆಂಬರ್ 2020, 9:22 IST
ಅಕ್ಷರ ಗಾತ್ರ

ಕೊಪ್ಪಳ: ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಗುರುವಾರ ನಗರದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.

ನಗರದ ತಹಶೀಲ್ದಾರ್‌ ಕಚೇರಿಯಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಕಾರ್ಮಿಕ ಮುಖಂಡ ವಿಠ್ಠಪ್ಪ ಗೋರಂಟ್ಲಿ, ಬಸವರಾಜ ಶೀಲವಂತರ ಮಾತನಾಡಿ,ಕೇಂದ್ರ ಸರ್ಕಾರ ರೂಪಿಸಿರುವ 4 ಕಾರ್ಮಿಕ ಸಂಹಿತೆಗಳು ವಾಪಸ್‌ ಆಗಬೇಕು,ರೈತ ವಿರೋಧಿ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಮುಂತಾದ ಕೃಷಿ ಸಂಬಂಧ ಕಾಯಿದೆಗಳು ತಿದ್ದುಪಡಿರದ್ದು ಮಾಡಿ,ರಾಜ್ಯ ಸರ್ಕಾರ ಹೊರಡಿಸಿರುವ ಸುಘ್ರಿವಾಜ್ಞೇ ಹಿಂದೆ ಪಡೆಯಬೇಕು ಎಂದು ಆಗ್ರಹಿಸಿದರು.

ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರೈಲ್ವೆ, ರಸ್ತೆ, ವಿದ್ಯುತ್,ದೂರಸಂಪರ್ಕ, ವಿಮಾ, ಬ್ಯಾಂಕ್ ಮುಂತಾದ ಸಾರ್ವಜನಿಕ ಉದ್ಯಮೆಗಳು ಖಾಸಗಿಕರಣ ನಿಲ್ಲಬೇಕು.ಗ್ರಾಮೀಣ ಪ್ರದೇಶ ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನಗಳ ಕೆಲಸ ನೀಡಬೇಕು. ಕೂಲಿಯನ್ನು ಕನಿಷ್ಠ 600ರವರೆಗೆ ಹೆಚ್ಚಿಸಬೇಕು.ಸರ್ಕಾರಿ ಸಾರ್ವಜನಿಕ ರಂಗದ ನೌಕರರ ಒತ್ತಾಯದ ಅಕಾಲಿಕ ನಿವೃತ್ತಿ ಸುತ್ತೋಲೆಯಲ್ಲಿ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರಿಗೆ ಪಿಂಚಣಿ ಒದಗಿಸಬೇಕು. ಮತ್ತು ಎನ್.ಪಿ.ಎಸ್ ಅನ್ನು ರದ್ದು ಮಾಡಬೇಕು.ಕನಿಷ್ಠ ವೇತನ 21 ಸಾವಿರ ನಿಗದಿ ಮಾಡಬೇಕು.ಅಂಗನವಾಡಿ ಬಿಸಿಯೂಟ ಆಶಾ ಮುಂತಾದ ಸ್ಕೀಂ ನೌಕರರನ್ನು ಕಾಯಂ ಮಾಡಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಅಗತ್ಯ ಹಣಕಾಸು ಸಂಪನ್ಮೂಲ ಒದಗಿಸಬೇಕು.

ಎಲ್ಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕೋವಿಡ್-19 ಪ್ಯಾಕೇಜ್ ₹10 ಸಾವಿರಕ್ಕೆ ಹೆಚ್ಚಸಬೇಕು ಎಂಬುವುದು ಸೇರಿದಂತೆ ಮುಂತಾದ ಬೇಡಿಕೆಗಳ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.

ವಿವಿಧ ಕಾರ್ಮಿಕ ಸಂಘಟನೆಯ ಮುಖಂಡರಾದಕಾಸೀಂಸಾಬ್ ಸರ್ದಾರ, ಶರಣು ಗಡ್ಡಿ, ಹನುಮೇಶ ಕಲ್ಮಂಗಿ, ಶೇಖಪ್ಪ ಚೌಡ್ಕಿ, ಕೆ.ಎಸ್ ಜನಾರ್ಧನ್, ಅನ್ನಪೂರ್ಣಮ್ಮ, ಮಮ್ತಾಜ್‍ ಬೇಗಂ, ಶಿವಪ್ಪ, ಉಮೇಶ ಅಗಳಕೇರಾ, ಷಣ್ಮುಖಪ್ಪ ಹಿರೇಬಿಡನಾಳ, ಮಕ್ಬೂಲ್‌ ರಾಯಚೂರು, ಎ.ಬಿ.ದಿಂಡೂರು, ಗಾಳೆಪ್ಪ ಮುಂಗೂಲಿ, ಅಂಬ್ರೇಶ ಹಿರೇಬಗನಾಳ, ಬಸವರಾಜ ಕಂಠಿ, ಶೈಲಜಾ, ಶಿವಲೀಲಾ ಅಗಳಕೇರಾ, ಪುಷ್ಪಾ, ಶೇಖಮ್ಮ ಮುಂತಾದವರು ಇದ್ದರು.

ಅಂಚೆ ಕಚೇರಿಯಲ್ಲಿ ನಡೆದ ಮುಷ್ಕರದಲ್ಲಿಅಖಿಲ ಭಾರತ ಅಂಚೆ ನೌಕರರ ಸಂಘದಜಿಲ್ಲಾ ಘಟಕದ ಅಧ್ಯಕ್ಷ ಜಿ.ಎನ್.ಹಳ್ಳಿ ಮಾತನಾಡಿದರು. ಅಂಚೆ ಇಲಾಖೆಯಜಿ.ಕಾರ್ತಿಕ, ವೀರಣ್ಣ ಹೊಸಮನಿ, ಬಸವರಾಜ ತಲೆಖಾನ್, ಗೋಣೆಪ್ಪ ಹಲಗೇರಿ, ಸೋಮಶೇಖರಗೌಡ ಮುಂತಾದವರು ಇದ್ದರು.

ಕನಕಗಿರಿಯಲ್ಲಿ ಉತ್ತಮ ಸ್ಪಂದನೆ

ಕನಕಗಿರಿ: ಇಲ್ಲಿನ ಸಿಐಟಿಯು, ಬಿಸಿಯೂಟ, ಅಂಗನವಾಡಿ, ಭಾರತ ವಿದ್ಯಾರ್ಥಿ ಫೆಡರೇಷನ್, ಕೂಲಿಕಾರ್ಮಿಕರ ಸಂಘಟನೆಗಳು ವಿವಿಧ
ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಆಯೋಜಿಸಿದ್ದ ಸಾರ್ವತ್ರಿಕ ಮುಷ್ಕರ ಯಶಸ್ವಿಯಾಗಿದೆ.

ಮುಷ್ಕರದ ಕುರಿತು ಕಾರ್ಮಿಕರು ಅಂಗಡಿಗಳಿಗೆ ಕರ ಪತ್ರ ಹಂಚಿಕೆ ಮಾಡಿ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಅಂಗಡಿ, ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿಕೊಂಡು ಮುಷ್ಕರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ವಾಲ್ಮೀಕಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಬಿಸಿಯೂಟ ನೌಕರರ ಸಂಘದ ರಾಜ್ಯಾಧ್ಯಕ್ಷೆ ಲಕ್ಷ್ಮೀದೇವಿ ಸೋನಾರ, ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾಧ್ಯಕ್ಷ ಸುಭಾನ್ ಸೈಯದ ಮಾತನಾಡಿದರು.

ಪ್ರಮುಖರಾದ ಮಲ್ಲಪ್ಪ, ನಬೀಸಾಬ, ಈರಮ್ಮ, ಗಿರಿಜಾ ದರೋಜಿ, ಅಮರಮ್ಮ, ಪರಶುರಾಮ, ಹೊನ್ನುರುಸಾಬ, ಶಾಂತಮ್ಮ , ಹುಸೇನಪ್ಪ, ಯಮನೂರಪ್ಪ ಹಾಗೂ ಶಿವಕುಮಾರ ಇದ್ದರು.

ಶಿರಸ್ತೇದಾರರಾದ ಶಿವಕುಮಾರ, ವಿಶ್ವೇಶ್ವರಯ್ಯ ಸಾಲಿಮಠ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಸರ್ಕಾರದಿಂದ ಕಾರ್ಮಿಕ ವಿರೋಧಿ ನೀತಿ: ಆರೋಪ

ಕುಷ್ಟಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ, ಕಾರ್ಮಿಕ ಮತ್ತು ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ
ನಡೆಸಿದವು.

ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ನಂತರ ವಿವಿಧ ಬೇಡಿಕೆಗಳು ಇರುವ ಮನವಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು.

ಸಿಐಟಿಯು ಮುಖಂಡ ಆರ್.ಕೆ.ದೇಸಾಯಿ, ಪ್ರಮುಖರಾದ ಕಲಾವತಿ ಮೆಣೆದಾಳ, ಚಂದನಗೌಡ ಪೊಲೀಸಪಾಟೀಲ, ಅನ್ನಪೂರ್ಣ ಪಾಟೀಲ, ಬಸವರಾಜ ಹಾಗೂ ಶರಣಪ್ಪ ಇದ್ದರು.

ಅಂಗನವಾಡಿ ಕಾರ್ಯಕರ್ತೆಯರು, ಅಕ್ಷರದಾಸೋಹ, ವಿದ್ಯಾರ್ಥಿ ಫೆಡರೇಷನ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು. ಸಬ್‌ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ, ಹನಮಸಾಗರ ಠಾಣೆ ಸಬ್‌ ಇನ್‌ಸ್ಪೆಕ್ಟರ್ ಅಶೋಕ ಬೇವೂರು, ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ಗಳಾದ ಈರಪ್ಪ ನಾಯಕ, ತಾಯಪ್ಪ, ಮಲ್ಲಪ್ಪ ಮತ್ತು ಜಿಲ್ಲಾ ಸಶಸ್ತ್ರ ಪೋಲಿಸ್ ತಂಡದವರು ಬಂದೋ ಬಸ್ತ್ ವ್ಯವಸ್ಥೆ
ಕಲ್ಪಿಸಿದ್ದರು.

ಪ್ರತಿಭಟನಾ ಮೆರವಣಿಗೆ

ಗಂಗಾವತಿ: ಕೇಂದ್ರ ಸರ್ಕಾರದ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಗತಿ ಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಕೃಷ್ಣದೇವರಾಯ ಸರ್ಕಲ್‍ನಲ್ಲಿ ಗುರುವಾರ ಸಾರ್ವತ್ರಿಕ ಮುಷ್ಕರ ನಡೆಸಲಾಯಿತು.

ಸಿಐಟಿಯು ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷ ನಿರುಪಾದಿ ಬೆಣಕಲ್ ಮಾತನಾಡಿ,‘ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಅಂಗನವಾಡಿ ನೌಕರರು ವೇತನ ಹೆಚ್ಚಳ ಮಾಡಬೇಕು ಎಂದು ಸುಮಾರು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ" ಎಂದು ಹೇಳಿದರು.

ಬಿಸಿಯೂಟ ನೌಕರರ ವೇತನ ಹೆಚ್ಚಳ ಮಾಡುವ ಬೇಡಿಕೆಯನ್ನು ಕೂಡ ನಿರ್ಲಕ್ಷ ಮಾಡಲಾಗಿದೆ. ಇಂತಹ ರೈತ, ಕಾರ್ಮಿಕ, ಬಡವರ ವಿರೋಧಿ ಸರ್ಕಾರದಿಂದ ದೇಶಕ್ಕೆ ಯಾವುದೇ ರೀತಿಯ ಲಾಭವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸಿಬಿಎಸ್ ಸರ್ಕಲ್‍ನಿಂದ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮಹಾವೀರ ಸರ್ಕಲ್, ಗಾಂಧಿ ಸರ್ಕಲ್, ಬಸವಣ್ಣ ಸರ್ಕಲ್, ಅಂಬೇಡ್ಕರ್ ಸರ್ಕಲ್‍ಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಮುಖಂಡರಾದ ಸಣ್ಣ ಹನುಮಂತಪ್ಪ, ಶರಣು ಪಾಟೀಲ, ನಾಗರಾಜ, ಮಂಜುನಾಥ ಡಗ್ಗಿ, ಶಿವಣ್ಣ ಬೆಣಕಲ್, ಮರಿನಾಗಪ್ಪ, ಕೃಷ್ಣಪ್ಪ ನಾಯಕ, ಶ್ರೀನಿವಾಸ ಹೊಸಳ್ಳಿ, ಬಾಳಪ್ಪ ಹುಲಿಹೈದರ, ಅಮರೇಶ ಕಡಗದ, ದುರಗಮ್ಮ, ಸುಜಾತ ಹಾಗೂ ಮೈನೂದ್ದೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT