ಬುಧವಾರ, ಫೆಬ್ರವರಿ 19, 2020
26 °C
ಆರ್‌.ಪ.ರಾಜೂರು ರಚಿಸಿದ ‘ಅಧ್ಯಾತ್ಮದ ಅಂತರಂಗ’ ಕೃತಿಯ ಲೋಕಾರ್ಪಣೆ

‘ಅಧ್ಯಾತ್ಮದಿಂದ ಜೀವನ ಸಾರ್ಥಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಕನೂರು: ಅಧ್ಯಾತ್ಮಿಕ ಶ್ರೀಮಂತಿಕೆ ಪಡೆದಾಗ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದು ಹಂಪಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಅಮರೇಶ ನುಗಡೋಣಿ ಹೇಳಿದರು.

ಪಟ್ಟಣದ ಇಟಗಿ ಭೀಮಾಂಬಿಕಾ ಮಠದದಲ್ಲಿ ಭಾನುವಾರ ನಡೆದ ನಿವೃತ್ತ ಉಪನ್ಯಾಸಕ ಆರ್.ಪಿ ರಾಜೂರು ಅವರ ರಚಿತ ‘ಅಧ್ಯಾತ್ಮದ ಅಂತರಂಗ’ ಕೃತಿ  ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಪ್ರಸ್ತುತ ಆಧುನಿಕತೆಯ ಭರಾಟೆಯಲ್ಲಿ ಯಾಂತ್ರಿಕ ಬದುಕಿನ ಒತ್ತಡದಲ್ಲಿ ಮನುಷ್ಯ ಶಾಂತಿ ಹಾಗೂ ನೆಮ್ಮದಿ ಕಾಣದೇ ಪರಿತಪಿಸುತ್ತಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.

ತತ್ವಪದಕಾರರು ಮೂಲತಃ ಗುರು­ಮಾರ್ಗವಾಗಿದ್ದು, ಗುರುಶಿಷ್ಯ ಸಂಬಂಧ­ದಲ್ಲಿ ಜಾತಿ ಧರ್ಮಗಳ ಕಟ್ಟಳೆಗಳಿರುವು­ದಿಲ್ಲ. ಗೋವಿಂದಭಟ್ಟ ಹಾಗೂ  ಶಿಶುನಾಳ ಶರೀಫ್, ಕಡಕೋಳ ಮಡಿವಾಳಪ್ಪ–ಚೆನ್ನೂರ ಜಲಾಲ ಸಾಹೇಬ ಹೀಗೆ ಅನೇಕ ಜೋಡಿಗಳನ್ನು ಇಲ್ಲಿ ಗುರುತಿಸಬಹುದು. ಆನುಭಾವಿಕ ನೆಲೆಯ ಇನ್ನೊಂದು ಲಕ್ಷಣ ಯೋಗ­ಮಾರ್ಗ. ದೇಹವೇ ಎಲ್ಲ ಸಾಧನೆಗಳ ತಾಣ ಎಂದರು.

ಡಾ.ಸಿ.ಬಿ ಚಿಲ್ಕರಾಗಿ ಪುಸ್ತಕ ಪರಿಚ ಯಿಸಿದರು. ಹಿರಿಯ ಸಾಹಿತಿ ವೀಠಪ್ಪ ಗೋರಂಟ್ಲಿ ಅಧ್ಯಕ್ಷತೆ ವಹಿಸಿದ್ದರು.

ಆಡ್ನೂರ- ರಾಜೂರಿನ ಪಂಚಾಕ್ಷರ ಶಿವಚಾರ್ಯ ಸ್ವಾಮೀಜಿ, ಅನ್ನದಾನೇಶ್ವರ ಮಠದ ಮಹಾದೇವ ದೇವರು ಸಾನಿದ್ಯ ವಹಿಸಿದ್ದರು.

ಡಿವೈಎಸ್‍ಪಿ ರುದ್ರೇಶ ಉಜ್ಜನಕೊಪ್ಪ, ಡಿ.ಎಂ,ಬಡಿಗೇರ, ಶಿವರಾಜ ಗುರಿಕಾರ, ಲಕ್ಷ್ಮಣ ಹಿರೇಮನಿ, ಹಿರಿಯ ಸಾಹಿತಿ ಮಾಹಂತೇಶ ಮಲ್ಲನಗೌಡ, ಹನುಮಂತಪ್ಪ ಕುರಿ, ಎಲ್.ಜಿ ರಾಟಿಮನಿ, ಪಕೀರಪ್ಪ ವಜ್ರಬಂಡಿ, ಶರಣಪ್ಪ ಕೊಪ್ಪದ, ಗಂಗಾಧರ ಅವಟೇರ್, ಹುನುಮೇಶಪ್ಪ ತಿಮ್ಮಾಪೂರ, ರುದ್ರಪ್ಪ ಭಂಡಾರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)