ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಚನ ಸಾಹಿತ್ಯಕ್ಕೆ ಅಪ್ಪಣ್ಣ ಕೊಡುಗೆ ಅಪಾರ’

ಕುಷ್ಟಗಿ: ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ
Last Updated 25 ಜುಲೈ 2021, 4:27 IST
ಅಕ್ಷರ ಗಾತ್ರ

ಕುಷ್ಟಗಿ: ‘ಸಮ ಸಮಾಜದ ಪರಿಕಲ್ಪನೆಯಲ್ಲಿ 12ನೇ ಶತಮಾನದಲ್ಲಿ ಹೊರಹೊಮ್ಮಿದ ಶರಣ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ನಿಜಸುಖಿ ಹಡಪದ ಅಪ್ಪಣ್ಣ ಅವರ ಬದುಕಿನ ರೀತಿ ಎಲ್ಲ ಕಾಲದ ಸಾಮಾಜಿಕ ವ್ಯವಸ್ಥೆಗೂ ಪ್ರಸ್ತುತ ಎನಿಸುತ್ತದೆ‘ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಪಟ್ಟಣದ ಗೌರಿ ನಗರದಲ್ಲಿ ನಿರ್ಮಾಣಗೊಂಡಿರುವ ನಿಜಸುಖಿ ಶರಣ ಹಡಪದ ಅಪ್ಪಣ್ಣ ಸಮುದಾಯ ಭವನದ ಉದ್ಘಾಟನೆ ಮತ್ತು ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಚಳವಳಿಯಲ್ಲಿ ತೊಡಗಿದ್ದ ಬಸವಣ್ಣ ಅವರ ಆಪ್ತರಾಗಿದ್ದ ಮತ್ತು ಸಲಹೆಗಾರರೂ ಆಗಿದ್ದ ಅಪ್ಪಣ್ಣ ಅನುಭವ ಮಂಟಪ ಬಸವಣ್ಣ ಅವರ ಕಾಯಕಕ್ಕೆ ಪ್ರಮುಖ ಆಧಾರವಾಗಿದ್ದರು. ವಚನ ಸಾಹಿತ್ಯದ ಮೂಲಕ ನಡೆದ ವರ್ಗ ರಹಿತ ಸಾಮಾಜಿಕ ಪರಿವರ್ತನೆಯ ಪ್ರಯತ್ನಕ್ಕೆ ಬಹಳಷ್ಟು ಶ್ರಮಿಸಿದ್ದರು ಎಂದು ಹೇಳಿದರು.

ಸಮಾಜದಲ್ಲಿ ಅನೇಕ ಶ್ರೀಮಂತ ಸಮುದಾಯಗಗಳೂ ಸಮುದಾಯ ಭವನಕ್ಕೆ ಸರ್ಕಾರದ ಅನುದಾನ ನಿರೀಕ್ಷಿಸುತ್ತಿರುವ ಸಂದರ್ಭದಲ್ಲಿ ಇಲ್ಲಿಯ ಹಡಪದ ಸಮುದಾಯದವರು ಆರ್ಥಿಕವಾಗಿ ಹಿಂದುಳಿದಿದ್ದರೂ ಸ್ವಂತ ಖರ್ಚಿನಲ್ಲಿ ಸಮುದಾಯ ಭವನ ನಿರ್ಮಿಸಿಕೊಂಡಿರುವುದನ್ನು ಇತರೆ ಸಮುದಾಯಗಳು ಅನುರಿಸು ವಂತಾಗಿದೆ. ಆದರೂ ಹಡಪದ ಸಮುದಾಯದ ಇತರೆ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ ಮಾತನಾಡಿ, ಹಡಪದ ಸಮುದಾ ಯದಲ್ಲಿ ಸಂಘಟನೆ, ಪರಸ್ಪರ ವಿಶ್ವಾಸ, ಬಂಧುತ್ವ ಉಳಿಸಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಸಮುದಾಯ ಭವನಕ್ಕೆ ಭೂಮಿ ದಾನಮಾಡಿದ ದಿ.ಶಿವರಾಜ ನಿಲೋಗಲ್ ಅವರ ಪುತ್ರ ನೀಲಕಂಠ ಬಾಬು ಹಾಗೂ ಎಂಜಿನಿಯರ್ ಆದೇಶ್ ಅವರನ್ನು ಹಡಪದ ಸಮಾಜದಿಂದ ಸತ್ಕರಿಸಲಾಯಿತು.

ಪುರಸಭೆ ಅಧ್ಯಕ್ಷ ಜಿ.ಕೆ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಹಡಪದ ಸಮುದಾಯದ ಗೌರವಾಧ್ಯಕ್ಷ ದೊಡ್ಡಪ್ಪ ಹೊಸೂರು ಅಧ್ಯಕ್ಷ ಎಚ್. ಪುತ್ರಪ್ಪ, ಉಪಾಧ್ಯಕ್ಷರಾದ ರುದ್ರಪ್ಪ ಹಡಪದ, ಶಿವಪ್ಪ ಇಟ್ಟಂಗಿ, ಕಾರ್ಯದರ್ಶಿ ಮಹಾಂತೇಶ ಅಮರಾವತಿ, ಖಜಾಂಚಿ ಶರಣಪ್ಪ ಆಡೂರು ಇತರರು ಇದ್ದರು. ಎಚ್‌.ಜಿ.ಮಹೇಶ್ ನಿರೂಪಿಸಿದರು.

ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಭಾಗವಹಿಸಿದ್ದ ಶಾಸಕ ಅಮರೇಗೌಡ ಬಯ್ಯಾಪುರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು. ತಹಶೀಲ್ದಾರ್ ಎಂ.ಸಿದ್ದೇಶ್‌, ಗ್ರೇಡ್‌ 2 ತಹಶೀಲ್ದಾರ್ ಮುರಳೀಧರ ಮುಕ್ತೆದಾರ ಹಾಗೂ ಹಡಪದ ಸಮುದಾಯದ ಪ್ರಮುಖರು ಇದ್ದರು.

ಟೆಂಗುಂಟಿ: ತಾಲ್ಲೂಕಿನ ಟೆಂಗುಂಟಿ ಗ್ರಾಮದಲ್ಲಿಯೂ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಾಳಮ್ಮ ಆಡಿನ, ಪ್ರಮುಖರಾದ ಹೊಳಿಯಪ್ಪ ಆಡಿನ, ಶರಣಗೌಡ ಪಾಟೀಲ, ಭರಮಗೌಡ ಮೇಟಿ, ದೊಡ್ಡಪ್ಪ ಹಡಪದ, ಗದ್ದೆಪ್ಪ ಹಡಪದ, ಗೂಳಪ್ಪ ಹಡಪದ, ವಕೀಲ ಪರಸಪ್ಪ, ಕನಕಪ್ಪ ತಳವಾರ, ಕಲಾವಿದರ ಬಸವರಾಜ ಹುಚನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT