ಶುಕ್ರವಾರ, ಸೆಪ್ಟೆಂಬರ್ 17, 2021
23 °C

ಮೊಹರಂ: ಸವಾರಿ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ಪಟ್ಟಣದ 12 ನೇ ವಾರ್ಡ್‌ನಲ್ಲಿ ಏಳನೇ ದಿನದ ಸವಾರಿ ಮೆರವಣಿಗೆ ಪ್ರಯುಕ್ತ ಬುಧವಾರ ಮೌಲಾಲಿ, ಇಮಾಮ್, ಕಾಸೀಮ್
ಪಾಂಜಾಗಳ ಮೆರವಣಿಗೆ ಸರಳವಾಗಿ ನಡೆಯಿತು.

ಮೆರವಣಿಗೆಯಲ್ಲಿ ಮಹಿಳೆಯರು, ಮಕ್ಕಳು ಪಾಲ್ಗೊಂಡು ಉತ್ಸವಕ್ಕೆ ಮೆರಗು ತಂದರು.

ಪಟ್ಟಣದ ವಿವಿಧ ದರ್ಗಾಗಳಲ್ಲಿ ವಿವಿಧ ದೇವರುಗಳ ಹೆಸರಲ್ಲಿ ಪಾಂಜಾಗಳನ್ನು ಕೂಡಿಸಲಾಗಿದೆ. ಆಯಾ ಪ್ರದೇಶಗಳಿಗೆ ತೆರಳಿ ಭಕ್ತರು ದೇವರುಗಳಿಗೆ ಭಕ್ತಿಯಿಂದ ನಮಸ್ಕರಿಸಿದರು.

ಕೆಲವರು ದೇವರುಗಳಿಗೆ ಕಾಣಿಕೆ ಸಮರ್ಪಿಸುತ್ತಿರುವುದು ಕಂಡುಬಂತು.

ಅಲಾಯಿ ಕುಣಿ ಬಳಿ ಮಕ್ಕಳು ಹಾಗೂ ಯುವಕರು ತಮಟೆ ಬಾರಿಸುತ್ತ, ಹೆಜ್ಜೆ ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.