ಮುನಿರಾಬಾದ್: ಇಲ್ಲಿನ ವಿಜಯನಗರ ಸಂಯುಕ್ತ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಈಚೆಗೆ ಕೊಪ್ಪಳದಲ್ಲಿ ನಡೆದ ತಾಲ್ಲೂಕು ಮಟ್ಟದ ಕಾಲೇಜು ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಬಾಲಕರ ವಿಭಾಗ: ಬಾಲಕರ ವಾಲಿಬಾಲ್ ಸುಮಾರು 28 ವರ್ಷಗಳ ಕಾಲ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ತಂಡದಲ್ಲಿ ಗುರುಕಿರಣ, ಕೆ.ಫರನ್, ದಿಲೀಪ್, ಅಕಾಶ ಅರ್.ಕೆ., ನಂದನ್ ಜ್ವಾಯ್, ಪ್ರಕಾಶ, ಮಹ್ಮದ್ ಉಸ್ಮಾನ್, ಹರೀಶ, ಹರ್ಷವರ್ಧನ, ವಿಶ್ವನಾಥ, ಮನೋಹರ, ಇಮಾನಿವೆಲ್.
5 ಸಾವಿರ ಮೀಟರ್ ನಡಿಗೆ: ಭರತಕುಮಾರ ( ಪ್ರಥಮ), ಅರ್ಷಾದ ಅಲಿ (3ನೇ ಸ್ಥಾನ). ಚಕ್ರ ಎಸೆತ: ಯಶವಂತ (3 ನೇ ಸ್ಥಾನ). ಕುಸ್ತಿ: ಆಸಿಫ್, ಎಂ.ಶಾಹಿಲ್ (ಪ್ರಥಮ). ಈಜು: ಬಾಲ ನರಸಿಂಹ, ರಾಜಾಭಕ್ಷಿ (ಪ್ರಥಮ ಸ್ಥಾನ).
ಟೆನ್ನಿಕ್ವಾಯಿಟ್: ಅಂಕಿತಾ ಎಚ್., ಅಂಕಿತಾ ಎಸ್., ಕವಿತಾ, ಪವಿತ್ರಾ, ಪ್ರಿಯಾಂಕಾ. ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಪ್ರಾಚಾರ್ಯ ಹಾಗೂ ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.